ಮೈಸೂರು: ಫಾಸ್ಟ್ ಟ್ರಾಕ್ ಪದ್ಧತಿ ವಿರೋಧಿಸಿ ಏಕಾಂಗಿ ಪ್ರತಿಭಟನೆ

Update: 2018-03-28 14:50 GMT

ಮೈಸೂರು,ಮಾ.28: ರಾಜ್ಯ ಸರ್ಕಾರ ಜಾರಿಗೆ ತಂದಿರುವ ಫಾಸ್ಟ್ ಟ್ರಾಕ್ ಪದ್ಧತಿಯನ್ನು ವಿರೋಧಿಸಿ ಇಲೆಕ್ಟ್ರಿಕಲ್ ನಾಗರಾಜ್ ಏಕಾಂಗಿ ಪ್ರತಿಭಟನೆ ನಡೆಸಿದರು

ಮೈಸೂರು ಜಿಲ್ಲಾಧಿಕಾರಿ ಕಚೇರಿ ಎದುರು ನಡೆದ ಪ್ರತಿಭಟನೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ರಾಜ್ಯ ಗುತ್ತಿಗೆದಾರರು 1922ರಿಂದ ಅಸ್ತಿತ್ವದಲ್ಲಿರುತ್ತಾರೆ. ಅಂದಿನ ದಿನಗಳಲ್ಲಿ 2000 ಜನ ಗುತ್ತಿಗೆದಾರರಿದ್ದು ಇದನ್ನೇ ನಂಬಿ ಬದುಕುತ್ತಿದ್ದಾರೆ. ರಾಜ್ಯ ಸರ್ಕಾರ ಏಕಾಏಕಿ ಫಾಸ್ಟ್ ಟ್ರಾಕ್ ಪದ್ಧತಿಯನ್ನು ತಂದು 1ಹೆಚ್.ಪಿಯಿಂದ 7ಹೆಚ್.ಪಿವರೆಗೆ ವಿದ್ಯುತ್‍ಚ್ಛಕ್ತಿ ಗುತ್ತಿಗೆದಾರರ ಅರ್ಜಿಯಲ್ಲಿ ಸಹಿ ಬೇಡವೆಂದು ತಿಳಿಸಿದೆ. ಬೆಂಗಳೂರಿನಲ್ಲಿ ಈ ಪದ್ಧತಿ ಈಗಾಗಲೇ ಆರಂಭವಾಗಿದೆ. ರಾಜ್ಯಾದ್ಯಂತ ಜಾರಿಗೆ ಬಂದಲ್ಲಿ ಸಣ್ಣಪುಟ್ಟ ಗುತ್ತಿಗೆದಾರರು ಬೀದಿಗೆ ಬೀಳಬೇಕಿದೆ. ಅದಕ್ಕಾಗಿ ಅದನ್ನು ಜಾರಿಗೊಳಿಸಬಾರದು ಎಂದು ಒತ್ತಾಯಿಸಿದರು. 


 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News