×
Ad

ಬಾಗೇಪಲ್ಲಿ: ಎರಡು ಪ್ರತ್ಯೇಕ ಪ್ರಕರಣ; ಇಬ್ಬರು ಅತ್ಯಾಚಾರ ಆರೋಪಿಗಳ ಬಂಧನ

Update: 2018-03-29 21:59 IST

ಬಾಗೇಪಲ್ಲಿ,ಮಾ.29: ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ಅಪ್ರಾಪ್ತ ಬಾಲಕಿಯರನ್ನು ಅಪಹರಿಸಿ ಅತ್ಯಾಚಾರ ಎಸಗಿದ ಆರೋಪದ ಮೇಲೆ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿ ಜಿಲ್ಲಾ ಸತ್ರ ನ್ಯಾಯಾಲಯದಲ್ಲಿ ಹಾಜರುಪಡಿಸಿದ್ದಾರೆ.

ತಾಲೂಕಿನ ಮಲಕಚೇರುವುಪಲ್ಲಿ ಗ್ರಾಮದ ಗಿರೀಶ್(21) ಎಂಬ ಯುವಕ ತನಜಾ ಎಂಬ ಬಾಲಕಿಯನ್ನು 4 ದಿನಗಳ ಹಿಂದೆ ಅಪಹರಿಸಿ ಅತ್ಯಾಚಾರ ಎಸಗಿದ್ದ ಎನ್ನಲಾಗಿದ್ದು, ಈ ಸಂಬಂಧ ಪೋಷಕರು ನೀಡಿದ ದೂರನ್ನು ದಾಖಲು ಮಾಡಿಕೊಂಡಿದ್ದ ಪೊಲೀಸರು ಬುಧವಾರ ಕೊರಟಗೆರೆಯಲ್ಲಿ ಆರೋಪಿಯನ್ನು ವಶಕ್ಕೆ ಪಡೆದು ಬಾಲಕಿಯನ್ನು ತನ್ನ ತಾಯಿಯ ಜತೆ ಕಳುಹಿಸಿಕೊಟ್ಟಿದ್ದಾರೆ. ಆರೋಪಿ ಗಿರೀಶನನ್ನು ಚಿಕ್ಕಬಳ್ಳಾಪುರ ಸತ್ರ ನಾಯ್ಯಾಲಯದಲ್ಲಿ ಹಾಜರುಪಡಿಸಲಾಗಿದೆ.

ಮತ್ತೊಂದು ಪ್ರಕರಣದಲ್ಲಿ ಮರವಪಲ್ಲಿ ಗ್ರಾಮದಲ್ಲಿ ಶ್ಯಾಮಲ ಎಂಬ ಅಪ್ರಾಪ್ತ ಬಾಲಕಿಯನ್ನು ಅಪಹರಿಸಿ ಅತ್ಯಾಚಾರ ಮಾಡಿದ ಅಪಾದನೆ ಮೇಲೆ ಪೊಲೀಸರು ಮುರಳಿ ಎಂಬಾತನನ್ನು ಬಂಧಿಸಿದ್ದಾರೆ. ಬಾಲಕಿಯನ್ನು ಪೋಷಕರ ವಶಕ್ಕೆ ನೀಡಲಾಗಿದ್ದು, ಆರೋಪಿಯನ್ನು ನ್ಯಾಯಾಲಯದಲ್ಲಿ ಹಾಜರುಪಡಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News