ಉತ್ತಮ ಕಥಾವಸ್ತು ಇರುವ ಡಿಕ್ಟೇಟರ್ ಚಿತ್ರ ಸಪ್ಟೆಂಬರ್ ನಲ್ಲಿ ಬಿಡುಗಡೆ: ಹುಚ್ಚ ವೆಂಕಟ್

Update: 2018-03-29 17:02 GMT

ಹಾಸನ,ಮಾ.29: ವರದಿಗಾರರು ಹಾಗೂ ಕ್ಯಾಮಾರಮೆನ್ ತಮ್ಮ ವೃತ್ತಿಯಲ್ಲಿ ಎದುರಿಸುವ ತೊಂದರೆಗಳ ಕಥೆಯನ್ನು ಇಟ್ಟುಕೊಂಡು ಡಿಕ್ಟೇಟರ್ ಎಂಬ ಕನ್ನಡ ಸಿನಿಮಾವನ್ನು ನಿರ್ಮಿಸಿರುವುದಾಗಿ ಚಲಚಿತ್ರದ ನಿರ್ದೇಶಕ ಹಾಗೂ ನಾಯಕ ನಟ ಹುಚ್ಚ ವೆಂಕಟ್ ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಗುರುವಾರ ಮಾತನಾಡಿ, ಇತ್ತಿಚಿನ ದಿವಸಗಳಲ್ಲಿ ಕೆಲಸ ಮಾಡುವ ಪತ್ರಕರ್ತರ ಮೇಲೆ ಬೆದರಿಕೆಯ ಕರೆ ಮಾಡುವುದರ ಮೂಲಕ ಸುದ್ದಿ ಮಾಡಲು ಅಡ್ಡಿಪಡಿಸಲಾಗುತ್ತಿದೆ. ಸಮಾಜದಲ್ಲಿ ಇಂದು ಶಾಂತಿ, ನೆಮ್ಮದಿಯಿಂದ ಇದ್ದೇವೆ ಎಂದರೇ ಪತ್ರಕರ್ತರ ಬರಹಗಳು ಕಾರಣ. ಸಿನಿಮಾದ ಚಿತ್ರಕಥೆ, ನಿರ್ದೇಶನ, ಸಂಭಾಷಣೆ ಸೇರಿದಂತೆ ನಾಲ್ಕು ಹಾಡುಗಳನ್ನು ನಾನೇ ಸಿದ್ದಪಡಿಸಿದ್ದು. ಸೆಪ್ಟಂಬರ್ ತಿಂಗಳಲ್ಲಿ ಚಲನಚಿತ್ರ ಬಿಡುಗಡೆಯಾಗಲಿದೆ. ಚಿತ್ರ ಕಥೆಯಲ್ಲಿ ತಾನು ಪತ್ರಕರ್ತರ ಪಾತ್ರಧಾರಿಯಾಗಿ ಅಭಿನಯಿಸುತ್ತಿದ್ದು, ಸಮಾಜದಲ್ಲಿ ಪತ್ರಕರ್ತ ಎದುರಿಸುವ ಸವಾಲುಗಳು ಬಗ್ಗೆ ಕಥೆ ಹೆಣೆಯಲಾಗಿದೆ. ಇತ್ತೀಚೆಗೆ ಪತ್ರಕರ್ತರ ಮೇಲೆ ಸಾಕಷ್ಟು ಹಲ್ಲೆ ಪ್ರಕರಣ ಹಾಗೂ ಬೆದರಿಕೆಯ ಪ್ರಕರಣಗಳು ನಡೆಯುತ್ತಿದೆ. ಸಮಾಜದ ಆಗು ಹೋಗುಗಳನ್ನು ಜನರಿಗೆ ತಿಳಿಸುವ ಪತ್ರಕರ್ತರ ಯಾವ ಸಂಕಷ್ಟುಗಳನ್ನು ಎದುರಿಸುತ್ತಿದ್ದಾನೆ ಎಂಬುದರ ಕುರಿತು ಚಿತ್ರ ನಿರ್ಮಿಸುತ್ತಿರುವುದಾಗಿ ಹೇಳಿದರು.

ಚುನಾವಣೆ ಸಮೀಪದಲ್ಲಿದ್ದು, ದಿನಾಂಕ ಕೂಡ ನಿಗದಿ ಮಾಡಿದೆ. ಶಾಸಕನಾಗಿರುವ ಮುನಿರತ್ನ ಎಂಬವರು ತಮ್ಮ ಕ್ಷೇತ್ರದ ಜನರಿಗೆ ಕುಕ್ಕರ್ ಕೊಡುವ ಮೂಲಕ ಮತದಾರರನ್ನು ಸೆಳೆಯುವ ಕೆಲಸ ಮಾಡುತ್ತಿದ್ದಾರೆ. ಮತದಾರರಿಗೆ ಶಾಸಕ ಮುನಿರತ್ನ ಅವರು ತಮ್ಮ ಭಾವಚಿತ್ರವಿರುವ ಕುಕ್ಕರ್ ಹಂಚಿಕೆ ಮಾಡಿ ಮತ ಪಡೆಯಲು ಮುಂದಾಗಿರುವುದು ಸರಿಯಲ್ಲ. ನಾನು ಯಾವ ಪಕ್ಷದ ಪರವಾಗಿ ಮಾತನಾಡುತ್ತಿಲ್ಲ. ಆದರೆ ಎಲ್ಲಾ ಪಕ್ಷದಲ್ಲೂ ಒಳ್ಳೆಯವರು ಹಾಗೂ ಕೆಟ್ಟವರು ಇದ್ದೆ ಇರುತ್ತಾರೆ. ಮುನಿರತ್ನ ಅವರಿಂದ ಕಾಂಗ್ರೆಸ್ ಪಕ್ಷಕ್ಕೆ ಕೆಟ್ಟ ಹೆಸರು ಬಂದಿದೆ. ಸಿಎಂ ಸಿದ್ದರಾಮಯ್ಯ ಅವರು ಎಷ್ಟು ಒಳ್ಳೆಯ ಕೆಲಸ ಮಾಡಿದರು. ಕಾಂಗ್ರೆಸ್ ಪಕ್ಷಕ್ಕೆಇಂತಹವರಿಂದ ಕೆಟ್ಟ ಹೆಸರು ಬರುತ್ತಿದೆ. ಇದೇ ಜಿಲ್ಲೆಯ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಹಾಗೂ ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರು ಕಳೆದ ಹಲವು ವರ್ಷಗಳಿಂದ ಅಧಿಕಾರವಿಲ್ಲದಿದ್ದರೂ ಜನಪರ ಕೆಲಸ ಮಾಡುತ್ತಿದ್ದು, ಇಂತಹವರ ಬಗ್ಗೆ ನಾನು ಮಾತನಾಡುವುದಿಲ್ಲ. ಮುನಿರತ್ನ ಅವರು ಕುಕ್ಕರ್ ಹಂಚಿರುವುದರ ಕುರಿತು ಚುನಾವಣಾ ಆಯೋಗಕ್ಕೆ ದೂರು ಸಲ್ಲಿಸಲಾಗುವುದು ಎಂದು ಹೇಳಿದರು. ಲಂಚ ಕೊಟ್ಟು ಮತ ಕೇಳಿ ಮುಂದೆ ಶಾಸಕನಾದರೇ ಸಮಾಜದಲ್ಲಿ ಭ್ರಷ್ಟಚಾರಿಗಳು ಆಗುತ್ತಾರೆ. ಮತದಾರರು ಒಳ್ಳೆ ಕೆಲಸ ಮಾಡುವವರನ್ನು ಗುರುತಿಸಿ ಅವರಿಗೆ ಮತ ಹಾಕುವಂತೆ ಮನವಿ ಮಾಡಿದರು. 

ಈ ಸಂದರ್ಭದಲ್ಲಿ ಡಿಕ್ಟೇಟರ್ ಕನ್ನಡ ಸಿನಿಮಾದ ನಾಯಕಿ ಐಶ್ವರ್ಯ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News