ಮಡಿಕೇರಿ: ಮುಸ್ಲಿಂ ಕಪ್ ಕ್ರಿಕೆಟ್ ಪಂದ್ಯಾಟಕ್ಕೆ ಚಾಲನೆ
ಮಡಿಕೇರಿ,ಮಾ.29: ಕೊಡಗು ಜಿಲ್ಲಾ ಮುಸ್ಲಿಂ ಕಪ್ ಕ್ರಿಕೆಟ್ ಪಂದ್ಯಾಟಕ್ಕೆ ಜನರಲ್ ತಿಮ್ಮಯ್ಯ ಕ್ರೀಡಾಂಗಣದಲ್ಲಿ ಚಾಲನೆ ನೀಡಲಾಯಿತು.
ಮುಸ್ಲಿಂ ಸ್ಪೋರ್ಟ್ಸ್ ಅಸೋಸಿಯೇಷನ್ ಮತ್ತು ತ್ಯಾಗ್ ಬಾಯ್ಸ್ ವತಿಯಿಂದ ಆಯೋಜಿಸಲಾಗಿರುವ ಪಂದ್ಯಾಟಕ್ಕೆ ಅಸೋಸಿಯೇಷನ್ ಸ್ಥಾಪಕಾಧ್ಯಕ್ಷ ರಶೀದ್ ಎಡಪಾಲ ಚಾಲನೆ ನೀಡಿದರು. ಅಧ್ಯಕ್ಷತೆಯನ್ನು ತ್ಯಾಗ್ ಬಾಯ್ಸ್ ಅಧ್ಯಕ್ಷ ನಾಸೀರ್ ವಹಿಸಿದ್ದರು. ಮುಖ್ಯ ಅತಿಥಿಯಾಗಿ ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ರಮೇಶ್ ಕುಟ್ಟಪ್ಪ ಪಾಲ್ಗೊಂಡು ಮಾತನಾಡಿದರು. ವೇದಿಕೆಯಲ್ಲಿ ಜಿಲ್ಲಾ ಮುಸ್ಲಿಂ ಸ್ಪೋರ್ಟ್ಸ್ ಅಸೋಸಿಯೆಷನ್ ಪ್ರಮುಖರಾಧ ಖಾದರ್, ರಶೀದ್, ಶಾಜಿ, ಷಂಶುದ್ದೀನ್, ಹನೀಫ್, ಶಾಜಿ ಇದ್ದರು. ಒಟ್ಟು 132 ತಂಡಗಳು ಪಂದ್ಯಾವಳಿಯಲ್ಲಿ ಭಾಗವಹಿಸುತ್ತಿದ್ದು, ನಿನ್ನೆ ಹಾಗೂ ಇಂದು 38 ಪಂದ್ಯಾಟಗಳು ಪೂರ್ಣಗೊಂಡಿವೆ.
ಪ್ರದರ್ಶನ ಪಂದ್ಯಾಟ: ಕೊಡಗು ಜಿಲ್ಲಾ ಪತ್ರಕರ್ತರ ಸಂಘ ಹಾಗೂ ಮುಸ್ಲಿಂ ಸ್ಪೋರ್ಟ್ಸ್ ಅಸೋಸಿಯೇಷನ್ ತಂಡಗಳ ನಡುವಿನ ಪ್ರದರ್ಶನ ಪಂದ್ಯಾಟ ನಡೆಯಿತು. ಪಂದ್ಯಾಟದಲ್ಲಿ ಜಿಲ್ಲಾ ಪತ್ರಕರ್ತರ ತಂಡ ಗೆಲುವು ಸಾಧಿಸಿತು.