ಸಿದ್ದರಾಮಯ್ಯ ವಿರುದ್ಧ 2 ಸಾವಿರ ಕೋಟಿ ರೂ. ಹಗರಣದ ಆರೋಪ ಇದೆ : ಕುಮಾರಸ್ವಾಮಿ

Update: 2018-03-31 13:31 GMT

ದಾವಣಗೆರೆ,ಮಾ.31: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರೆಸಾರ್ಟ್‍ನಲ್ಲಿ ವಾಸ್ತವ್ಯ ಹೂಡಿ, ವಿಧಾನಸಭಾ ಚುನಾವಣೆಯಲ್ಲಿ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಯಾವ ಸ್ಥಳಗಳಿಗೆ ಎಷ್ಟು ಹಣ ಹಂಚುವ ನಿಟ್ಟಿನಲ್ಲಿ ಹಣದ ಬಂಡಲ್ ಕಟ್ಟುತ್ತಿದ್ದಾರೆ ಎಂದು ಮಾಜಿ ಸಿಎಂ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ. ಕುಮಾರಸ್ವಾಮಿ ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.

ಸಿದ್ದರಾಮಯ್ಯ ವಿರುದ್ಧ 2 ಸಾವಿರ ಕೋಟಿ ರೂ. ಹಗರಣದ ಆರೋಪ ಇರುವುದು ನಿಜ. ಆದರೆ, ಅವರನ್ನು ರಕ್ಷಿಸಿಕೊಳ್ಳಲು ಕೆಂಪಣ್ಣ ಆಯೋಗ ರಚಿಸಿದ್ದಾರೆ. ಕೆಂಪಣ್ಣ ಆಯೋಗ ರಚನೆಗೊಂಡು ಮೂರು ವರ್ಷ ಕಳೆದರೂ ಈ ಆಯೋಗ ಏನು ವರದಿ ಕೊಟ್ಟಿದೆ ಅನ್ನೋದೆ ಯಾರಿಗೂ ತಿಳಿದಿಲ್ಲ. ಆದರೆ, ಇನ್ನೆರೆಡು ತಿಂಗಳಲ್ಲಿ ಹೊಸ ಸರ್ಕಾರ ಅಧಿಕಾರಕ್ಕೆ ಬರುವುದು ನಿಶ್ಚಿತ. ಆಗ ಸಿಎಂ ಸಿದ್ದರಾಮಯ್ಯ ಹಗರಣಗಳೆಲ್ಲವೂ ಹೊರಬರುತ್ತವೆ ಎಂದರು.

ಜಗಳೂರಿನ ಹೆಲಿಪ್ಯಾಡ್‍ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿಎಂ ಸಿದ್ದರಾಮಯ್ಯ ಬೇರೆ ಪಕ್ಷದ ನಾಯಕರನ್ನು ರೆಸಾರ್ಟ್‍ಗೆ ಕರೆಸಿಕೊಂಡು ಹಣದ ಆಮಿಷ ತೋರಿಸಿ ಪಕ್ಷಕೆ ಬರಮಾಡಿಕೊಳ್ಳಲು, ಅವರನ್ನು ಖರೀದಿಸುವ ಯತ್ನ ನಡೆಸುತ್ತಿದ್ದಾರೆ. ಆದರೆ, ಇದ್ಯಾವುದು ನಡೆಯುವುದಿಲ್ಲ ಎಂದು ಅವರು ಟೀಕಿಸಿದರು.

ಬಿಜೆಪಿಯ ಅಮಿತ್ ಶಾ ಪ್ರವಾಸದಿಂದ ಜೆಡಿಎಸ್‍ಗೆ ಯಾವುದೇ ನಷ್ಟವಿಲ್ಲ. ಮತದಾರರು ಈ ಬಾರಿ ಪ್ರಾದೇಶಿಕ ಪಕ್ಷ ಬೆಂಬಲಿಸುವುದು ನಿಶ್ಚಿತ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News