×
Ad

ಟಿಪ್ಪು ಆಡಳಿತವನ್ನು ಸಹಿಸದವರು ಅತನನ್ನು ಮತಾಂಧ ಎಂದು ಬಿಂಬಿಸಿದರು: ಪತ್ರಕರ್ತ ಬಿ.ಆರ್.ರಂಗಸ್ವಾಮಿ

Update: 2018-03-31 21:23 IST

ಮೈಸೂರು,ಮಾ.31: ಟಿಪ್ಪು ಆಡಳಿತವನ್ನು ಸಹಿದವರು ಆತನನ್ನು ಮತಾಂಧ ಎಂದು ಬಿಂಬಿಸಿದರು. ಆದರೆ ಟಿಪ್ಪು ಮತಾಂಧನಲ್ಲ, ಆತ ಸರ್ವಧರ್ಮಗಳ ಪ್ರಿಯನಾಗಿದ್ದ ಎಂದು ಪತ್ರಕರ್ತ ಬಿ.ಆರ್.ರಂಗಸ್ವಾಮಿ ಹೇಳಿದರು.

ನಗರದ ಎನ್.ಆರ್.ಮೊಹಲ್ಲಾದಲ್ಲಿರುವ ಉತ್ಸವ್ ಫಂಕ್ಷನ್ ಹಾಲ್‍ನಲ್ಲಿ ಶನಿವಾರ ಬಹುಮುಖಿ ಪ್ರಕಾಶನ, ಬಿವಿಎಸ್ ಹಾಗೂ ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ಸಂಯುಕ್ತಾಶ್ರಯದಲ್ಲಿ ಮಹೇಶ್ ಬಿ.ಇರಸವಾಡಿ ಅವರ 'ಟಿಪ್ಪು ಏಕೆ ಆದರ್ಶವಾಗಬೇಕು' ಎಂಬ ಪುಸ್ತಕ ಬಿಡುಗಡೆ ಮಾಡಿ ಅವರು ಮಾತನಾಡಿದರು.

ಟಿಪ್ಪು ಸರ್ವಾಧಿಕಾರಿಯಾಗಿದ್ದರೂ ಆತ ಹೃದಯವಂತ ಟಿಪ್ಪುವಿನ ಆಡಳಿತವನ್ನು ಸೂಕ್ಷ್ಮವಾಗಿ ಗಮನಸಿದರೆ ಆತ ಸರ್ವ ಧರ್ಮಗಳನ್ನೂ ಬಯಸುವವನಾಗಿದ್ದವನು, ಜಾತಿಗೊಂದು, ಧರ್ಮಕ್ಕೊಂದು ಸಂಸ್ಥಾನಗಳ ನಡುವೆ ಸಮಾನತೆಗಾಗಿ ಸಂಸ್ಥಾನ ಕಟ್ಟಿದ ಪ್ರಭು ಟಿಪ್ಪು ಆಗಿದ್ದನು ಎಂಬುದನ್ನು ಲೇಖಕ ಮಹೇಶ್ ಇರಸವಾಡಿ ತಮ್ಮ ಕೃತಿಯಲ್ಲಿ ತಿಳಿಸಿರುವುದು ಪ್ರಶಂಸನೀಯ ಎಂದರು.

ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಮೈಸೂರು ಜಿಲ್ಲಾ ದಲಿತ ಸಂಘರ್ಷ ಸಮಿತಿ ಸಂಘಟನಾ ಸಂಚಾಲಕ ಚೋರನಹಳ್ಳಿ ಶಿವಣ್ಣ ಮಾತನಾಡಿ,  ಸೀತೆಯನ್ನು ಕಾಡಿಗಟ್ಟಿದ ರಾಮನನ್ನು, ದ್ರೌಪದಿಯನ್ನು ಜೂಜಿಗಿಟ್ಟ ಧರ್ಮರಾಯನನ್ನು ಒಪ್ಪಿಕೊಳ್ಳುವ ಸಮಾಜವು ದೇಶಕ್ಕಾಗಿ ತನ್ನ ಮಕ್ಕಳನ್ನು ಅಡವಿಟ್ಟ ಟಿಪ್ಪುವನ್ನು ಏಕೆ ಒಪ್ಪುವುದಿಲ್ಲ ಎಂದು ಪ್ರಶ್ನಿಸಿದರು.

ಬಹುಮುಖಿ ಟ್ರಸ್ಟ್ ಅಧ್ಯಕ್ಷ ಸೋಸಲೆ ಗಂಗಾಧರ್, ಲೇಖಕ ಮಹೇಶ್ ಬಿ.ಇರಸವಾಡಿ, ಅಬ್ದುಲ್ ಮಜೀದ್ ಮತ್ತು ಸಿಎಫ್‍ಐ ಕರ್ನಾಟಕ ಸಂಘಟನೆಯ ಮಹಮದ್ ತಪ್ಸಿರ್ ಮಾತನಾಡಿದರು, ನಿವೃತ್ತ ಡಿಡಿಪಿಐ ಪುಟ್ಟನಂಜಯ್ಯ, ಅಂಬೇಡ್ಕರ್ ಕ್ಷೇಮಾಭಿವೃದ್ಧಿ ಬಳಗದ ಮಹದೇವ್, ಬೌದ್ಧ ಸಾಹಿತ್ಯ ಸಂಘದ ಅಧ್ಯಕ್ಷ ಶಿವಶಂಕರ್, ದಸಂಸ ಮುಖಂಡರಾದ ದೇವೇಂದ್ರ, ಯಡತೋರೆ ಮಹದೇವಯ್ಯ, ಬಿವಿಎಸ್ ಮೈಸೂರು ಜಿಲ್ಲಾಧ್ಯಕ್ಷ ಡಾ.ನವೀನ್ ಮೌರ್ಯ ಹಾಜರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News