×
Ad

ಕೊಲೆಗೆ ಸಂಚು : ಆರೋಪಿಗಳ ಬಂಧನ

Update: 2018-03-31 22:32 IST

ಮಂಡ್ಯ, ಮಾ.31: ಫೈನಾನ್ಸಿಯರ್ ಒಬ್ಬರ ಕೊಲೆಗೆ ಸಂಚು ರೂಪಿಸಿದ್ದ ಇಬ್ಬರು ಆರೋಪಿಗಳನ್ನು ಗ್ರಾಮಾಂತರ ಠಾಣೆ ಪೊಲೀಸರು ಬಂಧಿಸಿದ್ದಾರೆ.
ನಗರದ ಶಂಕರಮಠದ ಅರುಣೇಶ್, ಲೇಬರ್ ಕಾಲನಿಯ ಪುರುಷೋತ್ತಮ ಬಂಧಿತರಾಗಿದ್ದು, ಎರಡು ಕಬ್ಬಿಣದ ರಾಡು, ಆರು ಸಾವಿರ ರೂ. ನಗದು ವಶಪಡಿಸಿಕೊಳ್ಳಲಾಗಿದೆ.

ಇವರು ಬ್ಯಾಡರಹಳ್ಳಿ ಗೇಟ್ ಸಮೀಪ ಹತ್ಯೆಗೆ ಸಂಚು ರೂಪಿಸಿ ಹೊಂಚು ಹಾಕುತ್ತಿದ್ದರು ಎನ್ನಲಾಗಿದೆ. ಪಿಎಸ್‍ಐ ಅಜರುದ್ದೀನ್ ನೇತೃತ್ವದಲ್ಲಿ ಕಾರ್ಯಾಚರಣೆ ನೇತೃತ್ವ ವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News