ಚೀನಾ ಗಡಿಯಲ್ಲಿ ಭಾರತೀಯ ಯೋಧರು...
Update: 2018-03-31 23:38 IST
ಅರುಣಾಚಲ ಪ್ರದೇಶದ ಅಂಜಾವ್ ಜಿಲ್ಲೆಯಲ್ಲಿನ ವಾಸ್ತವಿಕ ನಿಯಂತ್ರಣಾ ರೇಖೆಯ ಸಮೀಪದ ಕಿಬಿತು ಎಂಬಲ್ಲಿ ಶನಿವಾರ ಭಾರತೀಯ ಯೋಧರು ಕವಾಯತು ನಡೆಸಿದರು. ಡೋಕಾ ಲಾ ಬಿಕ್ಕಟ್ಟಿನ ಬಳಿಕ ಭಾರತವು ಅರುಣಾಚಲ ವಿಭಾಗದಲ್ಲಿ ಟಿಬೆಟ್ ಪ್ರಾಂತಕ್ಕೆ ಹೊಂದಿಕೊಂಡಿರುವ ಚೀನಾದ ಗಡಿಯಲ್ಲಿನ ಪರ್ವತ ಪ್ರದೇಶಗಳಲ್ಲಿ ಹೆಚ್ಚಿನ ಯೋಧರನ್ನು ನಿಯೋಜಿಸಿದ್ದು, ಗಸ್ತುಕಾರ್ಯವನ್ನು ಗಮನಾರ್ಹವಾಗಿ ಹೆಚ್ಚಿಸಿದೆ.