×
Ad

​ದಾಖಲೆ ಇಲ್ಲದ 50 ಲಕ್ಷ ರೂ.ನಗದು ವಶ

Update: 2018-03-31 23:52 IST

ಬಾಗಲಕೋಟೆ, ಮಾ. 31: ಯಾವುದೇ ದಾಖಲೆ ಇಲ್ಲದೆ ಕಾರಿನಲ್ಲಿ ಸಾಗಿಸುತ್ತಿದ್ದ 50ಲಕ್ಷ ರೂ.ನಗದನ್ನು ಜಿಲ್ಲೆಯ ಹೊನ್ನಾಕಟ್ಟಿ ಕ್ರಾಸ್‌ನ ಚೆಕ್‌ಪೋಸ್ಟ್‌ನಲ್ಲಿ ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಶನಿವಾರ ಕೆಎ-29, ಎನ್-2053 ಸಂಖ್ಯೆಯ ಕಾರ್‌ನಲ್ಲಿ ಹಣ ಸಾಗಿಸಲಾಗುತ್ತಿತ್ತು. ಈ ವೇಳೆ ಬಾಗಲಕೋಟೆ ತಹಶೀಲ್ದಾರ್ ಹಾಗೂ ಇಲ್ಲಿನ ಗ್ರಾಮೀಣ ಠಾಣಾ ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿದ್ದು, ಈ ವೇಳೆ ನಗದು ಪತ್ತೆಯಾಗಿದೆ ಎಂದು ತಿಳಿದುಬಂದಿದೆ.

ಇಳಕಲ್‌ನಿಂದ ಬಾಗಲಕೋಟೆ ಕಡೆಗೆ ಕಾರು ಸಂಚರಿಸುತ್ತಿತ್ತು. ದಾಖಲೆ ಇಲ್ಲದೆ ಹಣ ಸಾಗಾಣೆ ಮಾಡುತ್ತಿದ್ದು, ಈ ಹಣ ಇಳಕಲ್ ಡಿಸಿಸಿ ಬ್ಯಾಂಕಿಗೆ ಸೇರಿದ್ದು ಎಂದು ಹೇಳಲಾಗಿದೆ. ಹಣ ಬ್ಯಾಂಕ್‌ಗೆ ಸೇರಿರುವುದು ಎಂಬುದಕ್ಕೆ ಪೂರಕ ದಾಖಲೆಗಳು ಇಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News