ಹೊನ್ನಾವರ: ನದಿಯಲ್ಲಿ ವ್ಯಕ್ತಿಯ ಶವ ಪತ್ತೆ
Update: 2018-04-01 21:33 IST
ಹೊನ್ನಾವರ,ಎ.01: ಶರಾವತಿ ಸೇತುವೆ ಬಳಿಯ ನದಿಯಲ್ಲಿ ರವಿವಾರ ತಾಲೂಕಿನ ಮಂಕಿ ರಾಮನಗರದ ನಿವಾಸಿ ಓಮಯ್ಯ ಶಾಂತಯ್ಯ ನಾಯ್ಕ (39) ಶವ ಪತ್ತೆಯಾಗಿದೆ.
ಅನಾರೋಗ್ಯದ ಕಾರಣ ಮಂಗಳೂರಿನ ಎ ಜೆ ಆಸ್ಪ್ರತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಇವರು, ಗುಣಮುಖವಾಗದೇ ಬೇಸತ್ತು ಶರಾವತಿ ನದಿಗೆ ಹಾರಿ ಅಥವಾ ಬಿದ್ದು ಮೃತಪಟ್ಟಿರಬಹುದು ಎಂದು ಶಂಕಿಸಲಾಗಿದೆ. ಈ ಕುರಿತು ಹೊನ್ನಾವರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.