ಚಿಕ್ಕಮಗಳೂರು: ಅನಿತಾ ಕೆ.ಎನ್ ರಿಗೆ ಡಾಕ್ಟರೇಟ್ ಪದವಿ
Update: 2018-04-01 22:04 IST
ಚಿಕ್ಕಮಗಳೂರು, ಎ.1: ಕುವೆಂಪು ವಿಶ್ವವಿದ್ಯಾಲಯವು ಅನಿತಾ ಕೆ.ಎನ್. ಅವರು ಡಾ ಬಿ.ಎಸ್.ರೆಡ್ಡಿ ಅವರ ಮಾರ್ಗದರ್ಶನದಲ್ಲಿ ಸಲ್ಲಿಸಿದ ರೋಲ್ ಆಫ್ ಜ್ಯೂಡಿಶಿಯರಿ ಇನ್ ಪ್ರೊಟೆಕ್ಷನ್ ಆಫ್ ಹ್ಯೂಮನ್ ರೈಟ್ಸ್ ಆಫ್ ವಿಮೆನ್ ಇನ್ ಇಂಡಿಯಾ ಎಂಬ ಮಹಾ ಪ್ರಬಂಧಕ್ಕೆ ಡಾಕ್ಟರೇಟ್ ಪದವಿ ನೀಡಿ ಗೌರವಿಸಿದೆ.
ಬೆಂಗಳೂರಿನಲ್ಲಿ ವಕೀಲ ವೃತ್ತಿಯಲ್ಲಿರುವ ಮೂಲತಃ ಚಿಕ್ಕಮಗಳೂರು ಜಿಲ್ಲೆಯ ಮಳಲೂರು ಗ್ರಾಮದವರಾದ ವಿನೋದ ಗೌಡರವರ ಪತ್ನಿ ಡಾ.ಅನಿತಾ ಕೆ.ಎನ್ ರವರು ರಾಮನಗರದ ಸರ್ಕಾರಿ ಕಾನೂನು ಕಾಲೇಜಿನಲ್ಲಿ ಸಹಾಯಕ ಕಾನೂನು ಪ್ರಾಧ್ಯಾಪಕರಾಗಿ ಹಾಗೂ ಬೆಂಗಳೂರಿನ ಕಾಲೇಜು ಶಿಕ್ಷಣ ಇಲಾಖೆಯ ಕೇಂದ್ರ ಕಚೇರಿಯಲ್ಲಿ ವಿಶೇಷಾಧಿಕಾರಿ (ಕಾನೂನು)ಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.