×
Ad

ಮಡಿಕೇರಿ: ಕಾರು-ಬೈಕ್ ಮುಖಾಮುಖಿ ಢಿಕ್ಕಿ; ಬೈಕ್ ಸವಾರ ಮೃತ್ಯು

Update: 2018-04-02 18:13 IST

ಮಡಿಕೇರಿ ಏ.2 : ಬೈಕ್ ಮತ್ತು ಕಾರಿನ ನಡುವೆ ಮುಖಾಮುಖಿ ಢಿಕ್ಕಿ ಸಂಭವಿಸಿ ಬೈಕ್ ಚಾಲಕ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ವಿರಾಜಪೇಟೆಯ ಕಾಕೋಟುಪರಂಬು ಎಂಬಲ್ಲಿ ನಡೆದಿದೆ.

ನಾಲ್ಕೇರಿ ಬೇತ್ರಿ ಗ್ರಾಮದ ಪೆಮ್ಮಾಡಿನ ಸಣ್ಣ ಬೆಳೆಗಾರ ಮತ್ತು ವ್ಯಾಪಾರಿ ಅರಿಯಂಡ ಮಿಥುನ್ ಜಯಪ್ರಕಾಶ್(27) ಎಂಬುವವರೇ ಮೃತ ವ್ಯಕ್ತಿ. ಮಿಥುನ್‍ರವರು ತಮ್ಮ ಬುಲೆಟ್ ಬೈಕ್(ಕೆ.ಎ.12-ಪಿ.4897)ನಲ್ಲಿ ನಾಲ್ಕೇರಿ ಕಡೆಯಿಂದ ವಿರಾಜಪೇಟೆ ಪಟ್ಟಣದ ಕಡೆಗೆ ಹೋಗುವ ವೇಳೆ ಗೋಣಿಕೊಪ್ಪಲು ಕಡೆಯಿಂದ ಮಡಿಕೇರಿಗೆ ಬರುತ್ತಿದ್ದ ಆಲ್ಟೋ ಕಾರಿಗೆ(ಕೆ.ಎ.12-9967)ಮುಖಾಮುಖಿ ಢಿಕ್ಕಿಯಾಗಿದೆ. ತಲೆ ಭಾಗಕ್ಕೆ ತೀವ್ರ ಪೆಟ್ಟಾಗಿ ರಕ್ತಸ್ರಾವದ ಪರಿಣಾಮವಾಗಿ ಮಿಥುನ್ ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ವಿರಾಜಪೇಟೆ ಗ್ರಾಮಾಂತರ ಠಾಣಾ ಪೋಲೀಸರು ಮೊಕದ್ದಮೆ ದಾಖಲಿಸಿಕೊಂಡಿದ್ದಾರೆ. 

ಅವಿವಾಹಿತ ಮಿಥುನ್‍ರವರು ತಂದೆ ಪೂಣಚ್ಚ, ತಾಯಿ ಮಲ್ಲಿಗೆ ಹಾಗೂ ಇಬ್ಬರು ಸಹೋದರಿಯರನ್ನು ಅಗಲಿದ್ದಾರೆ.  

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News