ಶಿವಮೊಗ್ಗ: ಬಸ್‍ನಿಲ್ದಾಣದ ಶೌಚಾಲಯ ಕೊಠಡಿಯಲ್ಲಿ ಯುವಕ ಆತ್ಮಹತ್ಯೆ
Update: 2018-04-02 22:09 IST
ಶಿವಮೊಗ್ಗ, ಏ. 2: ನಗರದ ಕೆಎಸ್‍ಆರ್‍ಟಿಸಿ ಮುಖ್ಯ ಬಸ್ ನಿಲ್ದಾಣ ಆವರಣದಲ್ಲಿರುವ ಶೌಚಾಲಯ ಕೊಠಡಿಯಲ್ಲಿಯೇ ಯುವಕನೋರ್ವ ನೇಣು ಬಿಗಿದು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಸೋಮವಾರ ಬೆಳಿಗ್ಗೆ ನಡೆದಿದೆ.
ಮೃತ ಯುವಕನ ಹೆಸರು, ವಿಳಾಸ ಸೇರಿದಂತೆ ಇತರೆ ಯಾವುದೇ ಮಾಹಿತಿಗಳು ತಿಳಿದುಬಂದಿಲ್ಲ. ಸುಮಾರು 30 ರಿಂದ 35 ವರ್ಷ ವಯೋಮಾನದವರಾಗಿದ್ದು, ಸಾಧಾರಣ ಮೈಕಟ್ಟು, ಎಣ್ಣೆಗೆಂಪು ಮೈ ಬಣ್ಣದವರಾಗಿದ್ದಾರೆ. ಕಪ್ಪು ಬಿಳಿ ಮಿಶ್ರಿತ ಮಾಸಲು ಶರ್ಟ್ ಹಾಗೂ ಪ್ಯಾಂಟ್ ಧರಿಸಿದ್ದಾರೆ.
ಈ ಸಂಬಂಧ ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.