ಇರಾಕ್: ಭಾರತೀಯರ ಮೃತದೇಹ ಸ್ವದೇಶಕ್ಕೆ
Update: 2018-04-02 23:49 IST
ಇರಾಕ್‌ನ ಮೊಸುಲ್‌ನಲ್ಲಿ ಐಸಿಸ್ ಉಗ್ರರಿಂದ ಹತ್ಯೆಗೀಡಾದ 39 ಭಾರತೀಯರ ಪೈಕಿ 38 ಮಂದಿಯ ಮೃತದೇಹಗಳನ್ನು ಹೊತ್ತ ವಿಶೇಷ ವಿಮಾನವು ಅಮೃತಸರದಲ್ಲಿ ಬಂದಿಳಿದಿದೆ ಎಂದು ಸೋಮವಾರದಂದು ಸರಕಾರಿ ಮೂಲಗಳು ತಿಳಿಸಿವೆ. ಮೃತದೇಹಗಳನ್ನು ವಾಪಸ್ ತರಲು ರವಿವಾರದಂದು ವಿದೇಶಾಂಗ ವ್ಯವಹಾರಗಳ ರಾಜ್ಯ ಸಚಿವ ವಿ.ಕೆ ಸಿಂಗ್ ಭಾರತೀಯ ವಾಯುಪಡೆಯ ವಿಮಾನದಲ್ಲಿ ಮೊಸುಲ್‌ಗೆ ತೆರಳಿದ್ದರು. ಹತ್ಯೆಗೀಡಾದವರ ಪೈಕಿ ಬಹುತೇಕರು ಕಟ್ಟಡ ನಿರ್ಮಾಣ ಕಾರ್ಮಿಕರಾಗಿದ್ದು 27 ಮಂದಿ ಪಂಜಾಬ್‌ನವರಾಗಿದ್ದರೆ, ನಾಲ್ಕು ಮಂದಿ ಬಿಹಾರ ಮೂಲದವರಾಗಿದ್ದರು.