×
Ad

ನಾಗಮಂಗಲ: 9 ಮಂದಿ ಕೊಲೆ, ದರೋಡೆ ಆರೋಪಿಗಳ ಬಂಧನ; 26 ಲಕ್ಷ ರೂ. ಮೌಲ್ಯದ ಸೊತ್ತು ವಶ

Update: 2018-04-07 23:50 IST

ನಾಗಮಂಗಲ, ಎ.7: ಕೊಲೆ, ಸುಲಿಗೆ, ಕಳ್ಳತನ ಸೇರಿದಂತೆ 23 ಪ್ರಕರಣಗಳನ್ನು ಬೇಧಿಸಿರುವ ನಾಗಮಂಗಲ ಪೊಲೀಸರು, ಇಬ್ಬರು ಅಪ್ರಾಪ್ತರು ಸೇರಿದಂತೆ 9 ಯುವಕರನ್ನು ಬಂಧಿಸಿ ಅವರಿಂದ 25,97,200 ಲಕ್ಷ ರೂ. ಮೌಲ್ಯದ ವಾಹನ, ಚಿನ್ನಾಭರಣ ವಶಪಡಿಸಿಕೊಂಡಿದ್ದಾರೆ.

ನಾಗಮಂಗಲ ಪಟ್ಟಣ ವಾಸಿಗಳಾದ ರಾಮ್‍ಕುಮಾರ್ ಅಲಿಯಾಸ್ ರಾಮ, ಉದಯ್ ಬಿನ್ ಬಸವರಾಜು, ಯಶವಂತ ಅಲಿಯಾಸ್ ಸಫಾರಿ ಬಿನ್ ಕೇಶವಶೆಟ್ಟಿ, ಅಭಿ ಅಲಿಯಾಸ್ ಅಭಿಶೇಕ್ ಬಿನ್ ಸುರೇಶ್, ಪ್ರದೀಪ ಅಲಿಯಾಸ್ ಮೂಳೆ ಬಿನ್ ಸುಂದರಾಚಾರ್, ಶಿವಕುಮಾರ ಅಲಿಯಾಸ್ ಪಾನಿಪೂರಿ ಕುಮಾರ, ನರಸಿಂಹಯ್ಯ ಅಲಿಯಾಸ್ ದೇವರಾಜ ಅಲಿಯಾಸ್ ಗೆಂಡೆ ಬಂಧಿತರು.

ಈ ಸಂಬಂಧ ಪಟ್ಟಣದ ಡಿವೈಎಸ್‍ಪಿ ಕಛೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ವಿವರ ನೀಡಿದ ಮಂಡ್ಯ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಜಿ.ರಾಧಿಕಾ, 1 ಕೊಲೆ, 1 ಸುಲಿಗೆ, 11 ಮನೆಕಳವು ಪ್ರಕರಣಗಳಲ್ಲಿ ಒಟ್ಟು 350 ಗ್ರಾಂ. ಚಿನ್ನದ ಒಡವೆ, 1,560 ಗ್ರಾಂ ಬೆಳ್ಳಿ ಪದಾರ್ಥಗಳು, ಸ್ಕಾರ್ಪಿಯೋ, ಟ್ರ್ಯಾಕ್ಟರ್ ಟ್ರೈಲರ್, ಆಟೋ, 7 ಮೋಟಾರ್ ಬೈಕ್ ವಶಪಡಿಸಿಕೊಳ್ಳಲಾಗಿದೆ ಎಂದರು.

ಸಿಕ್ಕಿ ಬಿದ್ದದ್ದು ಹೇಗೆ?: 2.3.18ರ  ತಡರಾತ್ರಿ ನಾಗಮಂಗಲ ತಾಲೂಕಿನ ಬೆಳ್ಳೂರು ಹೊಬಳಿಯ ತಾವರೇಕೆರೆ ಗ್ರಾಮದ ಗಿರೀಶ್ ಎಂಬುವರನ್ನು ದುಷ್ಕರ್ಮಿಗಳಿಂದ ಉಸಿರುಗಟ್ಟಿ ಭರ್ಬರವಾಗಿ ಕೊಲೆಮಾಡಿ ಹಾಲ್ತಿ ಸಮೀಪದ ಬ್ಯಾಡರಹಳ್ಳಿ ಬಳಿಯ ರಸ್ತೆ ಬದಿಯಲ್ಲಿರುವ ಪೈಪ್‍ಲೈನ್ ಗುಂಡಿಗೆ ಹಾಕಿ ಮಣ್ಣು ಮುಚ್ಚಿ ಪರಾರಿಯಾಗಿದ್ದರು. ಈ ಪ್ರಕರಣದ ತನಿಖೆಯಿಂದ ಕೊಲೆ ಆರೋಪಿಗಳು ಸಿಕ್ಕಿಬಿದ್ದರು.

ನಾಗಮಂಗಲ ಪಟ್ಟಣದಲ್ಲಿ  ಸಣ್ಣಪುಟ್ಟ ಕೂಲಿ ಕೆಲಸ ಮತ್ತು ಆಟೋ ಡ್ರೈವಿಂಗ್ ಕೆಲಸಮಾಡಿಕೊಂಡಿದ್ದ ಈ 9 ಮಂದು ದುಷ್ಕರ್ಮಿಗಳಿಗೆ ಒಬ್ಬಂಟಿಯಾಗಿ ಪ್ರಯಾಣಿಸುವವರೇ ಟಾರ್ಗೆಟ್ ಆಗಿದ್ದರು. ಹಗಲು ರಾತ್ರಿ ಬಾಗಿಲು ಹಾಕಿರುವ ಮನೆ, ದೀರ್ಘ ಸಮಯ ವಾಹನ ನಿಲುಗಡೆ, ರಾತ್ರಿವೇಳೆ ಒಬ್ಬಂಟಿಯಾಗಿ ಪ್ರಯಾಣಿಸುವವರನ್ನು ಪ್ಲಾನಿಂಗ್ ಮಾಡಿ ಕಳ್ಳತನ ಮಾಡುತ್ತಿದ್ದರು ಮತ್ತು ಆಟೋಗೆ ಹತ್ತಿಸಿಕೊಂಡು ನಿರ್ಜನ ಪ್ರದೇಶಕ್ಕೆ ತೆರಳುತ್ತಿದ್ದಂತೆ ಆತನ ಮೇಲೆ ಕಾರದ ಪುಡಿ ಎರಚಿ ದಾಳಿ ಮಾಡಿ ಹಣ ಕಿತ್ತು ಕೊಳ್ಳುತ್ತಿದ್ದರು ಎಂದು ರಾಧಿಕಾರ ವಿವರಿಸಿದರು.

ಈ ಪ್ರಕರಣದ ತನಿಖೆ ಕೈಗೊಂಡಿದ್ದ ಪೊಲೀಸರು ಕಳವು ಆಭರಣ ಮಾರಾಟ ಮಾಡಿರುವ ಸಂಬಂಧ ಆರೋಪಿಗಳನ್ನು ಕರೆತಂದು ವಿನಾಕಾರಣ ಕಿರುಕುಳ ನೀಡುತ್ತಿದ್ದರು ಎಂಬ ಗಿರವಿ ಅಂಗಡಿ ಮಾಲಕರ ಆರೋಪ ನಿರಾಧಾರ ಎಂದು ಎಸ್ಪಿ ಸ್ಪಷ್ಪಪಡಿಸಿದರು.

ಪೋಲಿಸ್ ತಂಡಕ್ಕೆ ಬಹುಮಾನ: ಪ್ರಕರಣ ಬೇಧಿಸಿದ ಸಿಪಿಐ ಧನರಾಜ್, ಗ್ರಾಮಾಂತರ ಠಾಣೆ ಪಿಎಸ್‍ಐ ಚಿದಾನಂದ್, ಬಿಂಡಿಗನವಿಲೆ ಪಿಎಸ್‍ಐ ಪ್ರಮೋದ್‍ಕುಮಾರ್, ಪಟ್ಟಣ ಠಾಣೆ ಪಿಎಸ್‍ಐ ಚಂದ್ರಶೇಖರ್ ಮತ್ತು ಸಿಬ್ಬಂದಿಗಳಾದ ಎಸ್.ಸಿದ್ದರಾಜು, ರಮೇಶ್, ಹನೀಫ್, ಇಂದ್ರಕುಮಾರ್, ಕಿರಣ್‍ಕುಮಾರ್, ಓಂಪ್ರದೀಫ್, ಎಸ್.ಆರ್,ಉಮೇಶ್, ಸಂದೀಪ್ ಅವರ ತಂಡಕ್ಕೆ 20 ಸಾವಿರ ನಗದು ಬಹುಮಾನ ನೀಡಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News