×
Ad

ರಾಜಾಸೀಟ್ ನಲ್ಲಿ ಎ.15 ರಂದು ಮತದಾನ ಕುರಿತ ಚಿತ್ರಕಲಾ ಸ್ಪರ್ಧೆ

Update: 2018-04-08 17:00 IST

ಮಡಿಕೇರಿ,ಎ.8:ವಿಶ್ವಚಿತ್ರ ಕಲಾದಿನಾಚರಣೆಯ ಪ್ರಯುಕ್ತ ಮಡಿಕೇರಿಯ ರಾಜಾಸೀಟ್ ನಲ್ಲಿ ಎ.15 ರಂದು ವಿದ್ಯಾರ್ಥಿಗಳಿಗೆ ಚಿತ್ರಕಲಾ ಸ್ಪರ್ಧೆ ಆಯೋಜಿಸಲಾಗಿದ್ದು, ಇದೇ ದಿನ ಮತದಾನದ ಮಹತ್ವ ಸಾರುವ ಚಿತ್ರಕಲಾ ಕ್ಯಾನ್ವಸ್ ಮೂಡಿಬರಲಿದೆ ಎಂದು ಕಾರ್ಯಕ್ರಮದ ಆಯೋಜಕರಾದ ಅನಿಲ್ ಎಚ್.ಟಿ., ಚಿತ್ರಕಲಾವಿದ ಬಿ.ಆರ್.ಸತೀಶ್ ತಿಳಿಸಿದ್ದಾರೆ.

ಮಡಿಕೇರಿ ತಾಲೂಕು ಜಾನಪದ ಪರಿಷತ್, ಮಡಿಕೇರಿ ರೋಟರಿ ಮಿಸ್ಟಿ ಹಿಲ್ಸ್ ಮತ್ತು  ಮತದಾನದ ಜಾಗೃತಿ ಮೂಡಿಸುವ ಕೊಡಗು ಜಿಲ್ಲಾ ಸ್ವೀಪ್ ಸಮಿತಿ ಸಂಯುಕ್ತಾಶ್ರಯದಲ್ಲಿ ಎ.15 ರಂದು ರವಿವಾರ ಬೆಳಗ್ಗೆ 10 ಗಂಟೆಗೆ ಚಿತ್ರಕಲಾ ಪ್ರದರ್ಶನ  ಉದ್ಘಾಟನೆಯಾಗಲಿದೆ. 

ವಿಶ್ವಚಿತ್ರ ಕಲಾ ದಿನಾಚರಣೆ ಅಂಗವಾಗಿ ಜಿಲ್ಲೆಯ ವಿದ್ಯಾರ್ಥಿಗಳಿಗೆ ಮತದಾನ ವಿಚಾರದ ಕುರಿತಂತೆ ಚಿತ್ರಕಲಾ ಸ್ಪರ್ಧೆಯನ್ನು ರಾಜಾಸೀಟ್ ನಲ್ಲಿಯೇ ಅಂದು ಬೆಳಗ್ಗೆ 10.30 ರಿಂದ 12 ಗಂಟೆಯವರೆಗೆ ಆಯೋಜಿಸಲಾಗಿದೆ. 1 ರಿಂದ 4, 5 ರಿಂದ 7 ಮತ್ತು 8 ರಿಂದ10 ಹಾಗೂ ವಿಶೇಷ ಚೇತನ ಮಕ್ಕಳ ವಿಭಾಗದಲ್ಲಿ ಮತದಾನ ಕುರಿತ ವಿಚಾರವಾಗಿ ಚಿತ್ರಕಲಾ ಸ್ಪರ್ಧೆ ಆಯೋಜಿಸಲಾಗಿದ್ದು ಸ್ಪರ್ಧಿಗಳೇ ಎಲ್ಲಾ ಪರಿಕರಗಳನ್ನು ತರಬೇಕೆಂದು ಆಯೋಜಕರು ತಿಳಿಸಿದ್ದಾರೆ. 

ಸ್ಪರ್ಧೆಯಲ್ಲಿ ಪಾಲ್ಗೊಳ್ಳುವ ವಿದ್ಯಾರ್ಥಿಗಳು ಎ.15 ರಂದು ರವಿವಾರ ಬೆಳಗ್ಗೆ 9.30 ಗಂಟೆಗೆ ರಾಜಾಸೀಟ್ ಗೆ ಬಂದು ಸ್ಥಳದಲ್ಲಿಯೇ ಹೆಸರು ನೋಂದಾಯಿಸಿಕೊಳ್ಳಬಹುದು.

ಇದೇ ಸಂದರ್ಭ ಮತದಾನದ ಮಹತ್ವ ಸಾರುವ  ಬೃಹತ್ ಕ್ಯಾನ್ವಸ್ ಅನ್ನು ಕಲಾವಿದ ಬಿ.ಆರ್.ಸತೀಶ್ ನೇತೃತ್ವದಲ್ಲಿ ರೂಪಿಸಲಾಗುತ್ತದೆ. ಹಾಗೆಯೇ ವಿರಾಜಪೇಟೆಯ ಗಾಯಕ  ಟಿ.ಡಿ.ಮೋಹನ್, ಕ್ಲಿಪರ್ಡ್ ಡಿಮೆಲ್ಲೋ  ತಂಡವು ಕಲಾವಿದ  ಸತೀಶ್ ಅವರೊಂದಿಗೆ ಗಾನ - ಕುಂಚ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುತ್ತಿದೆ. 

ಮಡಿಕೇರಿಯಲ್ಲಿ ಎರಡನೇ ವರ್ಷದ ವಿಶ್ವಚಿತ್ರಕಲಾ ದಿನಾಚರಣೆಯನ್ನು ಆಯೋಜಿಸಲಾಗುತ್ತಿದ್ದು,  ಸ್ಪರ್ಧಾ ವಿದ್ಯಾರ್ಥಿಗಳೊಂದಿಗೆ ಆಸಕ್ತರು ಕೂಡ ಕಾರ್ಯಕ್ರಮದಲ್ಲಿ ಪಾಲ್ಗೊಂಡು ವೈವಿಧ್ಯಮಯ ಚಿತ್ರಕಲೆ ವೀಕ್ಷಿಸಬಹುದೆಂದು ಮಡಿಕೇರಿ ತಾಲೂಕು ಜಾನಪದ ಪರಿಷತ್ ಅಧ್ಯಕ್ಷ ಅನಿಲ್ ಎಚ್.ಟಿ, ಚಿತ್ರಕಲಾವಿದ ಬಿ.ಆರ್.ಸತೀಶ್ ಜಂಟಿ ಹೇಳಿಕೆಯಲ್ಲಿ ತಿಳಿಸಿದ್ದಾರೆ.
 
ಹೆಚ್ಚಿನ ವಿವರಗಳಿಗೆ 9844060174 ಸಂಖ್ಯೆಗೆ ಸಂಪರ್ಕಿಸಬಹುದು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News