ಪರಮವೀರಚಕ್ರ ಪುರಸ್ಕೃತ ನಿವೃತ್ತ ಯೋಧ ನಿಧನ
Update: 2018-04-08 19:26 IST
ದಾವಣಗೆರೆ,ಎ.8 : ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದ ಹರಿಹರ ತಾಲೂಕು ಹೊಳೆ ಸಿರಿಗೆರೆ ಗ್ರಾಮದ ವೀರಯೋಧ ಕರ್ನಲ್ ರವೀಂದ್ರನಾಥ ಮಾಗೋಡ ಅವರು ರವಿವಾರ ಬೆಳಗ್ಗೆ ಹೃದಯಾಘಾತದಿಂದ ಬೆಂಗಳೂರಿನಲ್ಲಿ ಮರಣ ಹೊಂದಿದ್ದಾರೆ.
ಮೃತರ ಅಂತ್ಯಕ್ರಿಯೆಯು ಹೊಳೆಸಿರಿಗೆರೆ ಗ್ರಾಮದಲ್ಲಿ ಸೋಮವಾರ ನಡೆಯಲಿದೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ. 1979ರಲ್ಲಿ ಎನ್‍ಡಿಎ ವಿದ್ಯಾಭ್ಯಾಸ ಮಾಡಿ ಸೆಕೆಂಡ್ ಲೆಫ್ಟಿನೆಂಟ್ ಆಗಿ ಮದ್ರಾಸ್ ರೆಜಿಮೆಂಟಿನಲ್ಲಿ ಕಾರ್ಯನಿರ್ವಹಿಸಿದ್ದರು. 1997ರ ರಾಜ್ಯಸ್ಥಾನ ರೈಫಲ್ಸ್‍ನಲ್ಲಿ ಕಾರ್ಯನಿರ್ವಹಿಸುವ ಸಂದರ್ಭದಲ್ಲಿ ಸಂಭವಿಸಿದ ಕಾರ್ಗಿಲ್ ಯುದ್ದದ ಸಮಯದಲ್ಲಿ ಮುಂಚೂಣಿಯಲ್ಲಿದ್ದು, ಕಮಾಂಡೆಂಟ್ ಅಫೀಸ್‍ರಾಗಿ ಕಾರ್ಯನಿರ್ವಹಿಸಿ ಪರಮವೀರಚಕ್ರ ಪಡೆದಿದ್ದರು.