×
Ad

ಬಿಜೆಪಿ ಸಂವಿಧಾನವನ್ನು ಬದಲಿಸಲು ಹೊರಟಿದ್ದು, ಪ್ರಜಾಪ್ರಭುತ್ವದ ಉಳಿವಿಗೆ ಮಾರಕವಾಗಿದೆ: ಶಾಸಕ ಆರ್. ನರೇಂದ್ರರಾಜೂಗೌಡ

Update: 2018-04-08 20:45 IST

ಹನೂರು,ಎ.8 : ಬಿಜೆಪಿ ಸಂವಿಧಾನವನ್ನು ಬದಲಿಸಲು ಹೊರಟಿದ್ದು, ಪ್ರಜಾಪ್ರಭುತ್ವದ ಉಳಿವಿಗೆ ಮಾರಕವಾಗಿದೆ.ಆದುದರಿಂದ ಜನತೆ ಈ ಬಗ್ಗೆ ಮನದಟ್ಟು ಮಾಡಿಕೊಳ್ಳಬೇಕು ಎಂದು ಶಾಸಕ ಆರ್. ನರೇಂದ್ರರಾಜೂಗೌಡ ತಿಳಿಸಿದರು

ಕ್ಷೇತ್ರವ್ಯಾಪ್ತಿಯ ಶಾಗ್ಯ,ಬಂಡಳ್ಳಿ, ಮಣಗಳ್ಳಿ, ಎಲ್ಲೇಮಾಳ ಗ್ರಾಮಗಳಲ್ಲಿ ಮತ್ತು ಹನೂರು ಪಟ್ಟಣದಲ್ಲಿ ಮತ ಪ್ರಚಾರದ ಬಳಿಕ ಆಯೋಜಿಸಿದ್ದ ಕಾರ್ಯಕರ್ತರ ಹಾಗೂ ಮುಖಂಡರ ಸಭೆಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್‍ ಸಾಮಾಜಿಕ ನ್ಯಾಯದ ಪಕ್ಷವಾಗಿದ್ದು ಈ ಮೂಲಕ ಸಮಾಜದ ಎಲ್ಲಾ ವರ್ಗದವರಿಗೂ ಸ್ಥಾನಮಾನವನ್ನು ನೀಡಲಾಗಿದೆ, ಆದರೆ ಕೇಂದ್ರದಲ್ಲಿ ಆಡಳಿತದಲ್ಲಿರುವ ನರೇಂದ್ರ ಮೋದಿ ಸರ್ಕಾರ ಕೋಮುವಾದಿ ಪಕ್ಷವಾಗಿದ್ದು, ಸಮಾಜದ ನಡುವೆ ಸಾಮರಸ್ಯವನ್ನು ಹಾಳು ಮಾಡುವುದರ ಮೂಲಕ ಸಂಘರ್ಷ ಹಾಗೂ ಅಶಾಂತಿಗೆ ಎಡೆ ಮಾಡಿಕೊಡುತ್ತಿದೆ ಮತ್ತು ಅವರು ದೇಶವನ್ನು ಅಭಿವೃದ್ಧಿಯತ್ತ ಕೊಂಡೋಯ್ಯುತ್ತೇನೆ ಎಂದು ಜನರ ತೆರಿಗೆ ಹಣದಲ್ಲಿ ದೇಶ  ಸುತ್ತುತ್ತಾ ಕಾಲಹರಣ ಮಾಡುತ್ತಿದ್ದಾರೆ ,ಇದರಿಂದ ದೇಶದ ಅಭಿವೃದ್ಧಿ ಕುಂಠಿತವಾಗಿದೆ ಎಂದು ಆರೋಪಿಸದರು.

ಈ ಹಿಂದಿನ ಕಾಂಗ್ರೆಸ್‍ ಸರ್ಕಾರ ದೀನ ದಲಿತರ, ಹಿಂದುಳಿದವರ ಹಾಗೂ ರೈತರ ಒಳಿತಿಗಾಗಿ ಹಲವು ಯೋಜನೆಗಳನ್ನು ಜಾರಿಗೆ ತಂದಿದ್ದು, ಉತ್ತಮ ಆಡಳಿತ ನೀಡಿದೆ. ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಉತ್ತಮ ಆಡಳಿತ ಹಾಗೂ ವಿವಿಧ ಯೋಜನೆಗಳನ್ನು ಅನುಷ್ಟಾನಗೊಳಿಸುವುದರ ಮೂಲಕ ಜನರ ಮೆಚ್ಚುಗೆ ಗಳಿಸಿದೆ ಎಂದು ತಿಳಿಸಿದರು.

ಈ ಸಂಧರ್ಭದಲಿ ಪ.ಪಂ ಉಪಾದ್ಯಕ್ಷ ಬಸವರಾಜು , ಮಾಜಿ ಅದ್ಯಕ್ಷ ರಾಜೂಗೌಡ, ಮಹದೇವನಾಯ್ಕ, ದೇವರಾಜು, ಕಾಂಗ್ರೆಸ್‍ ಬ್ಲಾಕ್‍ ಅಧ್ಯಕ್ಷ ಕೆಂಪಯ್ಯ, ಮುಖಂಡ ಚಿಕ್ಕತಮ್ಮಯ್ಯಗೌಡ, ವೆಂಕಟರಮಣ ನಾಯ್ಡು, ಮಾದೇಶ್ ಹಾಗೂ ಇನ್ನಿತರರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News