×
Ad

ಸಂತೆಬಾಚಹಳ್ಳಿ ದೇವಾಲಯದಲ್ಲಿ ಲಕ್ಷಾಂತರ ರೂ. ಕಳವು

Update: 2018-04-08 20:53 IST

ಮಂಡ್ಯ, ಎ.8: ನಕಲಿ ಕೀ ಬಳಸಿ ಕೆ.ಆರ್.ಪೇಟೆ ತಾಲೂಕಿನ ಸಂತೆಬಾಚಹಳ್ಳಿ ಗ್ರಾಮದ ಪಟ್ಟಲದಮ್ಮ ದೇವಾಲಯಕ್ಕೆ ಶನಿವಾರ ತಡರಾತ್ರಿ ನುಗ್ಗಿರುವ ದುಷ್ಕರ್ಮಿಗಳು ಹುಂಡಿಹಲ್ಲಿದ್ದ ಹಣ ಹಾಗೂ ದೇವರ ವಿಗ್ರಹದ ಮೇಲಿನ ಚಿನ್ನ ಮತ್ತು ಬೆಳ್ಳಿಯ ಆಭರಣಗಳನ್ನು ಕಳವು ಮಾಡಿದ್ದಾರೆ.

ಹುಂಡಿಯನ್ನು ಒಡೆದು ಹಣ ದೋಚಲಾಗಿದೆ. ಕಳೆದ 15ದಿನಗಳ ಹಿಂದಷ್ಟೆ ಪಟ್ಟಲದಮ್ಮ ಹಬ್ಬ ನಡೆದ ಹಿನ್ನೆಲೆಯಲ್ಲಿ ಭಾಗವಹಿಸಿದ್ದ ಭಕ್ತಾಧಿಗಳು ಹರಕೆ ರೂಪದಲ್ಲಿ ಹುಂಡಿಗೆ ಲಕ್ಷಾಂತರ ರೂ. ಹಾಕಿದ್ದರು ಎನ್ನಲಾಗಿದೆ.

ಅಲ್ಲದೆ ಗರ್ಭಗುಡಿಯಲ್ಲಿದ್ದ ದೇವರ ವಿಗ್ರಹದ ಮೇಲಿದ್ದ ಲಕ್ಷಾಂತರ ರೂ. ಮೌಲ್ಯದ ಚಿನ್ನ ಮತ್ತು ಬೆಳ್ಳಿಯ ವಿವಿಧ ಆಭರಣಗಳನ್ನೂ ದುಷ್ಕರ್ಮಿಗಳು ದೋಚಿ ಪರಾರಿಯಾಗಿದ್ದಾರೆ ಎಂದು ಪೊಲೀಸರಿಗೆ ದೂರು ನೀಡಲಾಗಿದೆ.

ರವಿವಾರ ಬೆಳಗ್ಗೆ ಪೂಜೆ ಸಲ್ಲಿಸಲು ಬಂದ ಅರ್ಚಕ ಶ್ರೀಪತಿಯಿಂದ ವಿಷಯ ತಿಳಿದ ಗ್ರಾಮಸ್ಥರು ತಕ್ಷಣ ಪೊಲೀಸರಿಗೆ ದೂರು ನೀಡಿದರು. ಸಬ್‍ಇನ್ಸ್‍ಪೆಕ್ಟರ್ ವೆಂಕಟೇಶ್  ಸ್ಥಳ ಪರಿಶೀಲನೆ ನಡೆಸಿ ಹುಂಡಿಯನ್ನು ಒಡೆಯಲು ಬಳಸಿದ್ದ ಮಚ್ಚು ಮತ್ತು ಲಾಂಗುಗಳನ್ನು ವಶಕ್ಕೆ ಪಡೆದು ದುಷ್ಕರ್ಮಿಗಳ ಪತ್ತೆಗಾಗಿ ಬಲೆ ಬೀಸಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News