ಬಾಬಾಬುಡಾನ್‍ಗಿರಿ: ಸುಪ್ರೀಂ ಆದೇಶದಂತೆ ಶಾಖಾದ್ರಿಗೆ ಉಸ್ತುವಾರಿ ನೀಡಲು ಒತ್ತಾಯ
ಚಿಕ್ಕಮಗಳೂರು, ಮಾ.9: ಬಾಬಾಬುಡಾನ್‍ಗಿರಿ ದರ್ಗಾದ ಧಾರ್ಮಿಕ ಆಚರಣೆ ಸಂಬಂಧ ಉಚ್ಚ ನ್ಯಾಯಾಲಯ ಇತ್ತೀಚೆಗೆ ನೀಡಿರುವ ಆದೇಶದಂತೆ ದರ್ಗಾದ ಆಡಳಿತ ಉಸ್ತುವಾರಿಯನ್ನು ಶಾಖಾದ್ರಿ ಅವರಿಗೆ ಕೂಡಲೇ ವಹಿಸಬೇಕೆಂದು ಹಝ್ರತ್ ದಾದಾ ಹಯಾತ್ ಮೀರ್ ಖಲಂದರ್ ಕಮಿಟಿ ಒತ್ತಾಯಿಸಿದೆ.
ಈ ಸಂಬಂಧ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕಮಿಟಿ ಸದಸ್ಯರು, ಕಳೆದ 35 ವರ್ಷಗಳಿಂದ ನಡೆದ ಸುದೀರ್ಘ ಕಾನೂನು ಹೋರಾಟದ ಫಲವಾಗಿ ನ್ಯಾಯಾಲಯ ಒಂದು ಉತ್ತಮ ತೀರ್ಪು ನೀಡಿದೆ. ಈ ತೀರ್ಪಿನ ವಿಚಾರವಾಗಿ ಯಾವುದೇ ರಾಜಕೀಯ ಪಕ್ಷಗಳು, ಸಂಘಟನೆಗಳು ಮತ್ತೆ ವಿವಾದ ಹುಟ್ಟು ಹಾಕಬಾರದು. ನ್ಯಾಯಾಲಯ 9889ರ ಧಾರ್ಮಿಕ ದತ್ತಿ ಇಲಾಖೆ ಆಯುಕ್ತರ ಆದೇಶವನ್ನು ಎತ್ತಿ ಹಿಡಿದಿದ್ದು, ದರ್ಗಾದಲ್ಲಿ ಉರೂಸ್ ಹೊರತು ಪಡಿಸಿ ಬೇರೆ ಯಾವುದೇ ಆಚರಣಗೆ ಅವಕಾಶ ನೀಡಬಾರದೆಂದು ಉಲ್ಲೇಖಿಸಿದೆ. ನ್ಯಾಯಾಲಯದ ತೀರ್ಪಿನಂತೆ ಜಿಲ್ಲಾಡಳಿತ ಬಾಬಾಬುಡಾನ್‍ಗಿರಿ ದರ್ಗಾದ ಆಡಳಿತದ ಉಸ್ತುವಾರಿಯನ್ನು ಶಾಖಾದ್ರಿ ಅವರಿಗೆ ವಹಿಸು ಮೂಲಕ ಜಿಲ್ಲಾಡಳಿತ ದರ್ಗಾದಲ್ಲಿ ಧಾರ್ಮಿಕ ವಿಧಿಗಳ ಸುಗಮ ಆಚರಣೆಗೆ ಅನುವು ಮಾಡಿಕೊಡಬೇಕೆಂದು ಅವರು ಕೋರಿದರು.
ಶಾಖಾದ್ರಿ ಅವರ ಬಗೆಗಿನ ಹಣ ದುರಪಯೋಗ ಆರೋಪ ಸಂಬಂಧ ನ್ಯಾಯಾಲಯದಲ್ಲಿ ಅಂತಿಮ ತೀರ್ಪು ಹೊರಬಿದ್ದಿಲ್ಲ. ಈ ಆರೋಪ ಸಂಬಂಧ ನ್ಯಾಯಾಲಯ ನೀಡುವ ತೀರ್ಪಿಗೆ ಕಮಿಟಿ ಬದ್ಧವಾಗಿರುತ್ತದೆ. ದರ್ಗಾದಲ್ಲಿ 1898ರ ಧಾರ್ಮಿಕ ದತ್ತಿ ಇಲಾಖೆ ಆದೇಶದನ್ವಯ ಯಥಾಸ್ಥಿತಿ ಕಾಯ್ದುಕೊಳ್ಳಲು ಜಿಲ್ಲಾಡಳಿತ ಕ್ರಮ ವಹಿಸಬೇಕೆಂದು ಅವರು ಅವರು ಇದೇ ವೇಳೆ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಕಮಿಟಿ ಅಧ್ಯಕ್ಷ ಸಿರಾಝ್ ಹುಸೈನ್, ಉಪಾಧ್ಯಕ್ಷ ಮುಬಾರಕ್, ಸದಸ್ಯರಾದ ಸೈಯದ್, ನಾಝಿರ್ ಅಹ್ಮದ್ ಮತ್ತಿತರರು ಉಪಸ್ಥಿತರಿದ್ದರು.