×
Ad

ಶಿವಮೊಗ್ಗ: ಗಾಂಜಾ ಮಾರಾಟ; ತಾಯಿ- ಮಗ ಸೇರಿ ನಾಲ್ವರ ಬಂಧನ

Update: 2018-04-10 22:45 IST

ಶಿವಮೊಗ್ಗ, ಎ. 10: ಶಿವಮೊಗ್ಗ ನಗರದ ಕೋಟೆ ಹಾಗೂ ತುಂಗಾ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದ ಎರಡು ಪ್ರತ್ಯೇಕ ಘಟನೆಗಳಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದ ಆರೋಪದ ಮೇರೆಗೆ ತಾಯಿ-ಮಗ ಸೇರಿದಂತೆ ನಾಲ್ವರು ಆರೋಪಿಗಳನ್ನು ಬಂಧಿಸಿರುವ ಘಟನೆ ವರದಿಯಾಗಿದೆ. 

ಕೋಟೆ ಪೊಲೀಸ್ ಠಾಣೆ ವ್ಯಾಪ್ತಿಯ ರಾಜೀವ್‍ಗಾಂಧಿ ಬಡಾವಣೆಯಲ್ಲಿ ಡಿವೈಎಸ್‍ಪಿ ನೇತೃತ್ವದ ತಂಡವು ಖಚಿತ ವರ್ತಮಾನದ ಮೇರೆಗೆ ದಾಳಿ ನಡೆಸಿ, ಪುತ್ರನ ಜೊತೆ ಮನೆಯ ಮುಂಭಾಗ ಗಾಂಜಾ ಮಾರಾಟ ಮಾಡುತ್ತಿದ್ದ ರಿಹಾನ ಮತ್ತಾಕೆಯ ಪುತ್ರನನ್ನು ಬಂಧಿಸಿದ್ದಾರೆ. 200 ಗ್ರಾಂ ತೂಕದ ಗಾಂಜಾ ಹಾಗೂ 4530 ನಗದನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. 

ಮತ್ತೊಂದು ಘಟನೆಯಲ್ಲಿ ತುಂಗಾ ನಗರ ಪೊಲೀಸ್ ಠಾಣೆ ವ್ಯಾಪ್ತಿಯ ಗೋಪಿಶೆಟ್ಟಿ ಗ್ರಾಮದ ಕೆರೆಯ ಬಳಿ ಗಾಂಜಾ ಮಾರಾಟ ಮಾಡುತ್ತಿದ್ದ ಆರೋಪದ ಮೇರೆಗೆ ಪ್ರೀತಮ್ ಹಾಗೂ ಶರತ್‍ಕುಮಾರ್ ಎಂಬುವರನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತರಿಂದ 4000 ರೂ. ಮೌಲ್ಯದ 200 ಗ್ರಾಂ ತೂಕದ ಗಾಂಜಾವನ್ನು ವಶಕ್ಕೆ ಪಡೆದುಕೊಂಡು ಕೇಸ್ ದಾಖಲಿಸಿಕೊಂಡಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News