×
Ad

ಜೆಡಿಎಸ್ ಬಗ್ಗೆ ಹಗುರವಾಗಿ ಮಾತಾಡಿಲ್ಲ: ಝಮೀರ್ ಅಹಮದ್ ಸ್ಪಷ್ಟನೆ

Update: 2018-04-10 23:34 IST

ಮಂಡ್ಯ, ಎ.10: ನಾನು ಮೊದಲಿದ್ದ ಜೆಡಿಎಸ್ ಪಕ್ಷದ ಬಗ್ಗೆ ಗೌರವವಿದೆ. ಆ ಪಕ್ಷದ ಬಗ್ಗೆ ಹಗುರವಾಗಿ ಮಾತನಾಡಿಲ್ಲ ಎಂದು ಮಾಜಿ ಶಾಸಕ ಝಮೀರ್ ಅಹಮದ್ ಹೇಳಿದ್ದಾರೆ.

ಶ್ರೀರಂಗಪಟ್ಟಣ ವಿಧಾನಸಭಾ ಕ್ಷೇತ್ರದ ತಾಲೂಕಿನ ಇಂಡುವಾಳು ಗ್ರಾಮದ ಕೆಪಿಸಿಸಿ ಸದಸ್ಯ ಸಚ್ಚಿದಾನಂದ ಮನೆ ಎದುರು ಮಂಗಳವಾರ ನಡೆದ ಕಾಂಗ್ರೆಸ್ ಸಭೆಯಲ್ಲಿ ಅವರು ಮಾತನಾಡಿದರು.

ಜೆಡಿಎಸ್ 115 ಸ್ಥಾನ ಗೆದ್ದರೆ ನಾನು ರಾಜಕೀಯ ನಿವೃತ್ತಿ ಪಡೆಯುತ್ತೇನೆಂದು ಹೇಳಿದ್ದೆ. ಆದರೆ, ಕೆಲವು ಚಾನಲ್‍ಗಳಲ್ಲಿ 15 ಸ್ಥಾನ ಎಂದು ತಿರುಚಿ ಪ್ರಸಾರ ಮಾಡುತ್ತಿವೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ದೇವೇಗೌಡರು ನನ್ನ ರಾಜಕೀಯ ಗುರುಗಳು. ನಾನಾಗಿ ಪಕ್ಷ ಬಿಡಲಿಲ್ಲ, ಅವರು ಅಂದ ಮೇಲೆ ಪಕ್ಷ ಬಿಟ್ಟಿದ್ದೀನಿ. ಹಿಂದೆ ನಡೆದು ಬಂದ ದಾರಿಯನ್ನು ಮರೆಯುವ ವ್ಯಕ್ತಿ ನಾನಲ್ಲ ಎಂದು ಜಮೀರ್ ಸ್ಪಷ್ಟಪಡಿಸಿದರು.

ರಾಜ್ಯದಲ್ಲಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರ ಜನೋಪಯೋಗಿ ಕೆಲಸ ಮಾಡಿದ್ದು, ಚುನಾವಣೆಯಲ್ಲಿ ಜನರು ಕಾಂಗ್ರೆಸ್ ಗೆಲ್ಲಿಸಬೇಕು. ಮಂಡ್ಯ ಅಭಿವೃದ್ಧಿ ಕಾಳಜಿ ಹೊಂದಿರುವ ಚಲುವರಾಯಸ್ವಾಮಿಯನ್ನು ಬೆಂಬಲಿಸಬೇಕು ಎಂದು ಅವರು ಕರೆ ಮನವಿ ಮಾಡಿದರು.

ಶ್ರೀರಂಗಪಟ್ಟಣದಲ್ಲಿ ಕಾಂಗ್ರೆಸ್‍ನ ಪ್ರಬಲ ಟಿಕೆಟ್ ಆಕಾಂಕ್ಷಿಯಾಗಿದ್ದ ಇಂಡುವಾಳು ಸಚ್ಚಿದಾನಂದ ತ್ಯಾಗ ಮಾಡಿ ರಮೇಶ್‍ಬಾಬು ಬೆಂಬಲಕ್ಕೆ ನಿಂತಿದ್ದಾರೆ. ಕಾಂಗ್ರೆಸ್ ಸರಕಾರದಲ್ಲಿ ಅವರಿಗೆ ತನ್ನ ಹುದ್ದೆ ಸಿಗಲಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News