ನೊನಕ ಜಗತ್ತಿನ ಅತಿ ಹಿರಿಯ ಪುರುಷ
Update: 2018-04-10 23:46 IST
ಜಪಾನ್‌ನ 112 ವರ್ಷದ ಮಸಾರೊ ನೊನಕ ಅವರನ್ನು ಮಂಗಳವಾರ ಜಗತ್ತಿನ ಅತಿ ಹಿರಿಯ ಪುರುಷ ಎಂಬುದಾಗಿ ಘೋಷಿಸಲಾಗಿದೆ. 1905 ಜುಲೈ 25ರಂದು ಜನಿಸಿದ ನೊನಕ ಅವರಿಗೆ ಜಪಾನ್‌ನ ಉತ್ತರದ ದ್ವೀಪ ಹೊಕ್ಕಾಯಿಡೊದಲ್ಲಿರುವ ಅವರ ಮನೆಯಲ್ಲಿ ಗಿನ್ನೆಸ್ ವರ್ಲ್ಡ್ ರೆಕಾರ್ಡ್‌ನ ಅಧಿಕಾರಿಗಳು ಜಗತ್ತಿನ ಅತಿ ಹಿರಿಯ ಪುರುಷ ಎಂಬ ಪ್ರಮಾಣಪತ್ರವನ್ನು ನೀಡಿದರು.