×
Ad

ಹನೂರು: ಹಲವು ಬಿಜೆಪಿ ಮುಖಂಡರು ಕಾಂಗ್ರೆಸ್ ಸೇರ್ಪಡೆ

Update: 2018-04-11 17:59 IST

ಹನೂರು,ಎ.11: ಹನೂರು ಕ್ಷೇತ್ರ ವ್ಯಾಪ್ತಿಯ ಕುರುಟ್ಟಿಹೂಸರು ಗ್ರಾಮದಲ್ಲಿ ಶಾಸಕ ನರೇಂದ್ರರಾಜೂಗೌಡ ನೇತೃತ್ವದಲ್ಲಿ ಹಲವು ಬಿಜೆಪಿ ಮುಖಂಡರು  ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದರು.

ನಂತರ ಮಾತನಾಡಿದ ಶಾಸಕರು, ಕಾಂಗ್ರೆಸ್ ಪಕ್ಷದ ಹಲವಾರು ಜನಪರ ಕಾರ್ಯಕ್ರಮಗಳು ಮತ್ತು ಸರ್ಕಾರದ ಅಭಿವೃದ್ದಿಗಳನ್ನು ಕಂಡು ಹಲವಾರು ಮುಖಂಡರು ಇಂದು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆ ಆಗಿದ್ದಾರೆ. ಹಾಗೂ ಹನೂರು ಕ್ಷೇತ್ರ ವ್ಯಾಪ್ತಿಯಲ್ಲಿ ಕಳೆದ ಅವಧಿಯಲ್ಲಿ ಮಾಡಿದ ಅಭಿವೃದ್ಧಿಯನ್ನು ನೋಡಿ ಈ ಚುನಾವಣೆಯಲ್ಲಿ ಅತ್ಯಧಿಕ ಮತಗಳ ಅಂತರದಲ್ಲಿ ನನ್ನ ಗೆಲುವಿಗೆ ಸಹಕರಿಸಿ ಎಂದು ಮನವಿ ಮಾಡಿದರು. 

ಈ ಸಂದರ್ಭದಲ್ಲಿ ಶಾಸಕರು ಬಿಜೆಪಿ ತೊರೆದು ಕಾಂಗ್ರೆಸ್ ಸೇರಿದ ಎಲ್ಲಾ ಮುಖಂಡರಿಗೆ ಪಕ್ಷದ ಶಾಲನ್ನು ಹೊದಿಸಿ ಬರ ಮಾಡಿಕೊಂಡರು. 

ಸಮಾರಂಭದಲ್ಲಿ ತಾಪಂ ಅದ್ಯಕ್ಷ ರಾಜು, ಜಿಪಂ ಸದಸ್ಯರಾದ ಬಸವರಾಜು, ಮುಖಂಡ ಗೆಜ್ಜೆಗೌಡ, ನಟರಾಜು, ರಂಗಶೆಟ್ಟಿ, ಶಿವಗುಪ್ತ, ಮರಿಗೌಡ , ಇನ್ನಿತರರು ಹಾಜರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News