×
Ad

ಗಂಗಾವತಿ: ಮಾಜಿ ಜಿ.ಪಂ ಸದಸ್ಯ ಮುಕುಂದರಾವ್ ಭವಾನಿಮಠ ಕಾಂಗ್ರೆಸ್ ಸೇರ್ಪಡೆ

Update: 2018-04-11 18:33 IST

ಗಂಗಾವತಿ,ಎ.11: ಚುನಾವಣೆ ಸಮೀಪಿಸುತ್ತಿದ್ದಂತೆಯೇ ಪಕ್ಷಾಂತರ ಪರ್ವ ಅಧಿಕವಾಗಿದ್ದು, ಮಾಜಿ ಜಿ.ಪಂ ಸದಸ್ಯ ಮುಕುಂದರಾವ್ ಭವಾನಿಮಠ ಬಿಜೆಪಿ ತೊರೆದು ಕಾಂಗ್ರೆಸ್ ಸೇರ್ಪಡೆಯಾಗಿದ್ದಾರೆ.

ಕಳೆದ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರಸ್ ಬಿ. ಫಾರಂ ದೊರೆಯದೇ ಕನಕಗಿರಿ ವಿಧಾನಸಭಾ ಕ್ಷೇತ್ರ ದಿಂದ ಬಿಎಸ್ಸಾರ್ ಕಾಂಗ್ರೆಸ್ ನಿಂದ ಸ್ಪರ್ಧಿಸಿ ಸೋಲನುಭವಿಸಿ, ಬಿಜೆಪಿ ಸೇರ್ಪಡೆ ಯಾಗಿದ್ದ ಮುಕುಂದರಾವ್ ಭವಾನಿಮಠ ಮತ್ತೆ ಕಾಂಗ್ರೆಸ್ ಸೇರ್ಪಡೆ ಯಾಗಿದ್ದಾರೆ. ಶಿವರಾಜ ತಂಗಡಗಿಯೊಂದಿಗೆ ದಿಲ್ಲಿಗೆ ತೆರಳಿದ ಮುಕುಂದರಾವ್ ಭವಾನಿಮಠ ರಾಜ್ಯದ ಉಸ್ತುವಾರಿ ವೇಣುಗೋಪಾಲ್ ನಿವಾಸದಲ್ಲಿ ಕಾಂಗ್ರೆಸ್ ಸದಸ್ಯತ್ವ ಪಡೆದರು.

ಈ ಸಂದರ್ಭದಲ್ಲಿ ಸಿ.ಎಂ ಸಿದ್ಧರಾಮಯ್ಯ, ಶಾಸಕರಾದ ಶಿವರಾಜ ತಂಗಡಗಿ, ಹಂಪನಗೌಡ ಬಾದರ್ಲಿ ಸೇರಿದಂತೆ ಇನ್ನಿತರರಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News