ಕೊಳ್ಳೇಗಾಲ: ಬಿಎಸ್‍ಪಿ, ಜೆಡಿಎಸ್ ಕಾರ್ಯಕರ್ತರ ಸಭೆ, ಪಕ್ಷ ಸೇರ್ಪಡೆ ಕಾರ್ಯಕ್ರಮ

Update: 2018-04-12 13:28 GMT

ಕೊಳ್ಳೇಗಾಲ,ಎ.12: ನಾನು ರೈತರ ಹಾಗೂ ಸಾಮಾನ್ಯ ಬಡ ಜನರೊಂದಿಗೆ ಇದ್ದು, ಹಲವಾರು ಸಮಸ್ಯೆಗಳನ್ನು ಬಗೆಹರಿಸುವ ನಿಟ್ಟಿನಲ್ಲಿ ಕೆಲಸಗಳನ್ನು ಮಾಡುತ್ತಾ ಬಂದಿದ್ದೇನೆ. ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ನನಗೆ ಗೆಲ್ಲಿಸಿಕೊಡುವ ಮೂಲಕ ನಿಮ್ಮ ಸೇವೆ ಮಾಡಲು ಅವಕಾಶ ಮಾಡಿಕೊಡಬೇಕೆಂದು ಎಂದು ಬಿಎಸ್‍ಪಿ ರಾಜ್ಯಾಧ್ಯಕ್ಷ ಎನ್.ಮಹೇಶ್ ಅವರು ತಿಳಿಸಿದರು.

ಪಟ್ಟಣದ ಭ್ರಮರಾಂಭ ಕಲ್ಯಾಣ ಮಂಟಪದಲ್ಲಿ ಏರ್ಪಡಿಸಿದ್ದ ಬಿಎಸ್‍ಪಿ ಮತ್ತು ಜೆಡಿಎಸ್ ಕಾರ್ಯಕರ್ತರ ಸಭೆ ಹಾಗೂ ಸೇರ್ಪಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನನ್ನನ್ನು ಮೂರು ಬಾರಿ ಸೋಲಿಸಿದ್ದೀರಿ. ಇದು ನನಗೆ ಕೊನೆಯ ಅವಕಾಶ. ಇದೊಂದು ಬಾರಿ ನನ್ನನ್ನು ಗೆಲ್ಲಿಸಿಕೊಡಬೇಕು ಎಂದು ಬಿಎಸ್‍ಪಿ ಪಕ್ಷದ ಮುಖಂಡರ ಜೊತೆ ಮನವಿ ಮಾಡಿಕೊಂಡರು. ಕೊಳ್ಳೇಗಾಲ ಪಟ್ಟಣದ 31 ವಾರ್ಡ್‍ನಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷವನ್ನು ಬಿಟ್ಟು ಬಿಎಸ್‍ಪಿ ಪಕ್ಷಕ್ಕೆ 50 ಕ್ಕೂ ಹೆಚ್ಚು ಮಂದಿ ಸೇರಿದ್ದಾರೆ ಎಂದು ತಿಳಿಸಿದರು.

ಕಳೆದ  2013 ರಲ್ಲಿ ಪಟ್ಟಣದದಿಂದ 28 ಸಾವಿರ ಮತಗಳು ಚಲಾವಾಣೆಯಾಗಿ ಅದರಲ್ಲಿ ಬಿಎಸ್‍ಪಿಗೆ 6 ಸಾವಿರ ಮತಗಳು ಮಾತ್ರ ಬಂದಿದ್ದು, ನಮ್ಮ ಸೋಲಿಗೆ ಕಾರಣವಾಗಿತ್ತು. ಈ  ಬಾರಿ ಹಾಗಾಗಬಾರದು. ಪ್ರತಿ ಬೂತ್‍ನಲ್ಲೂ 300 ಮತಗಳನ್ನು ಪಡೆಯಬೇಕು. ಮತ್ತು ಟೌನ್‍ನಿಂದ ಒಟ್ಟು ಕನಿಷ್ಠ 16 ಸಾವಿರ ಮತಗಳನ್ನು ಪಡೆಯಲು ಶ್ರಮ ವಹಿಸಬೇಕು ಎಂದು ಕರೆ ನೀಡಿದರು.

ನಾನು ಶಾಸಕನಾದರೆ ಯಾವುದೇ ಮಧ್ಯವರ್ತಿಯನ್ನು ಇಟ್ಟುಕೊಳ್ಳುವುದಿಲ್ಲ. ರಾಜಕಾರಣದ ಒಂದು ಮಾದರಿಯನ್ನು ಸೃಷ್ಟಿಸುವ ಕನಸು ಮತ್ತು  ಅಭಿವೃದ್ದಿಯ ಮಾದರಿ ಸೃಷ್ಟಿಸುವ ಕನಸನ್ನು ಇಟ್ಟುಕೊಂಡಿದ್ದೇನೆ ಎಂದು ಅವರು ಹೇಳಿದರು.

ಈ ಸಭೆಯಲ್ಲಿ ನಗರಸಭಾ ಸದಸ್ಯ ಕೃಷ್ಣಯ್ಯ, ರಾಮಕೃಷ್ಣ, ರಂಗಸ್ವಾಮಿ, ತಾ.ಪಂ ನಾಗರಾಜು, ಮುಖಂಡರಾದ ಉಪ್ಪಾರ ಮಾದೇಶ್, ಇಂದ್ರೇಶ್, ಚಾಮರಾಜು, ರಮೇಶ್, ಸಮೀಉಲ್ಲಾ, ಸೋಮಣ್ಣ, ಜಗದೀಶ್,  ರಾಜೇಂದ್ರ, ಇಕಾವುಲ್ಲಾ, ಶವನಂಜಪ್ಪ, ಚಂದ್ರು ರಮೆಶ್ ಸೇರಿ ಹಲವು ಮುಖಂಡರು ಹಾಜರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News