ದಾವಣಗೆರೆ: ಸಬ್ಸಿಡಿಯರಿ ಟವರ್ ಕಂಪೆನಿಗೆ ಪರವಾನಗಿ ನೀಡಬಾರದೆಂದು ಒತ್ತಾಯಿಸಿ ಧರಣಿ
Update: 2018-04-12 21:31 IST
ದಾವಣಗೆರೆ,ಎ.12: ಈಗಷ್ಟೇ ಪ್ರಾರಂಭವಾಗಿರುವ ಬಿಎಸ್‍ಎನ್‍ಎಲ್ ಸಬ್ಸಿಡಿಯರಿ ಪ್ರತ್ಯೇಕ ಟವರ್ ಕಂಪನಿಯನ್ನು ಈ ಕೂಡಲೇ ರದ್ದುಗೊಳಿಸಬೇಕು ಎಂದು ಆಗ್ರಹಿಸಿ ಇಲ್ಲಿನ ಪಿ.ಜೆ. ಬಡಾವಣೆಯಲ್ಲಿರುವ ಬಿಎಸ್‍ಎನ್‍ಎಲ್ ಕಚೇರಿ ಅವರಣದಲ್ಲಿ ಗುರುವಾರ ನೌಕರರು ಅಸೋಸಿಯೇಷನ್ ನೇತೃತ್ವದಲ್ಲಿ ಸಾಂಕೇತಿಕ ಧರಣಿ ನಡೆಸಿದರು.
ಈ ವೇಳೆ ಬಿಎಸ್‍ಎನ್‍ಎಲ್‍ಇಯುನ ಜಿಲ್ಲಾ ಕಾರ್ಯದರ್ಶಿ ಈರಣ್ಣ ಮಾತನಾಡಿ, ಸಬ್ಸಿಡಿಯರಿ ಟವರ್ ಕಂಪನಿಗೆ ಟವರ್ ನಿರ್ಮಾಣಕ್ಕೆ ಅವಕಾಶ ಮಾಡಿಕೊಡಬಾರದು. ಇದಕ್ಕೆ ಅವಕಾಶ ಮಾಡಿಕೊಟ್ಟರೆ ಬಿಎಸ್‍ಎನ್‍ಎಲ್‍ಗೆ ನಷ್ಟವಾಗುತ್ತದೆ. ಆದ್ದರಿಂದ ಯಾವುದೇ ಕಾರಣಕ್ಕೂ ಈ ಕಂಪನಿಗೆ ಪರವಾನಗಿ ನೀಡಬಾರದು ಎಂದು ಒತ್ತಾಯಿಸಿದರು.
ಧರಣಿಯಲ್ಲಿ ಸಂಘಟನೆಯ ಗೋಪಾಲ್ ನಾಯ್ಕ್, ಅನಂದ್, ಸೂರ್ಯ ನಾಯ್ಕ, ಪ್ರಕಾಶ್, ಎ.ಕೆ. ರಾಮಪ್ಪ, ಹಾಲೇಶ್, ಅರೀಫವುಲ್ಲಾ ಖಾನ್, ಶಂಭುಲಿಂಗಪ್ಪ, ಜೋಷಿ, ಗಂಗಪ್ಪ, ಹರಿದಾಸ್, ಶಿವಲಿಂಗಪ್ಪ ಇತರರು ಇದ್ದರು.