×
Ad

ಸಾಧಿಸುವ ಛಲ ಇದ್ದಲ್ಲಿ ಗುರಿ ಮುಟ್ಟಲು ಸಾಧ್ಯ: ಜೆಸಿಐ ರಾಷ್ಟ್ರೀಯ ಉಪಾಧ್ಯಕ್ಷ ಲಾಯ್ಡ್ ಮಿಸ್ಕಿತ್

Update: 2018-04-12 22:37 IST

ಕಳಸ, ಎ.12: ಮನುಷ್ಯನಲ್ಲಿ ಸಾದಿಸಬೇಕು ಎನ್ನುವ ಕಿಚ್ಚು ಇದ್ದಾಗ ಮಾತ್ರ ಆತ ಜೀವನದಲ್ಲಿ ತನ್ನ ಗುರಿಯನ್ನು ಮುಟ್ಟಲು ಸಾಧ್ಯ ಎಂದು ಜೆಸಿಐ ರಾಷ್ಟ್ರೀಯ ಉಪಾಧ್ಯಕ್ಷ ಡಾ.ನವೀನ್ ಲಾಯ್ಡ್ ಮಿಸ್ಕಿತ್ ಹೇಳಿದರು.

ಸಂಸೆಯಲ್ಲಿ ಜೇಸಿಐ ಬೆಳಾಲುಕೊಪ್ಪದ ಆತೀಥ್ಯದಲ್ಲಿ ಜೇಸಿಐ ಸಂಸೆ ಸೌಹಾರ್ದ ನೂತನ ಘಟಕದ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಪ್ರಪಂಚದ ಅತ್ಯಂತ ದೊಡ್ಡ ದೊಡ್ಡ ವ್ಯಕ್ತಿಗಳು ಜೇಸಿಐ ಯಲ್ಲಿ ಸಿಗುವ ಉತ್ತಮ ತರಬೇತಿಗಳನ್ನು ಪಡೆದವರಾಗಿದ್ದಾರೆ. ಸಂಸ್ಥೆಯಲ್ಲಿ ಕೇವಲ ಸದಸ್ಯರಾಗಿದ್ದರೆ ಪ್ರಯೋಜನಕ್ಕೆ ಬಾರದು. ಬದಲಾಗಿ ಸಂಸ್ಥೆಯ ಮುಖಾಂತರ ಸಿಗುವ ತರಬೇತಿಗಳಲ್ಲಿ ಪಾಲ್ಗೊಂಡು ಉತ್ತಮ ವ್ಯಕ್ತಿಯಾಗಿ ತನ್ನನ್ನು ತಾನು ಬದಲಾವಣೆ ಮಾಡಿಕೊಂಡಾಗ ಆತ ಭವಿಷ್ಯದಲ್ಲಿ ಉತ್ತಮ ವ್ಯಕ್ತಿಯಾಗಲು ಸಾಧ್ಯ ಎಂದು ಹೇಳಿದರು.

ವಲಯ 14ರ ಉಪಾಧ್ಯಕ್ಷೆ ಸಮತಾ ಮಿಸ್ಕಿತ್ ಮಾತನಾಡಿ, ಸಂಸೆ ಎಂಬ ಪುಟ್ಟ ಊರಿನಲ್ಲಿ ಜೇಸಿಐ ಅಂತ ದೊಡ್ಡ ಸಂಸ್ಥೆ ಹುಟ್ಟಿಗೆ ಕಾರಣವಾಗಿದೆ. ಗ್ರಾಮೀಣ ಪ್ರದೇಶದಲ್ಲಿ ಅದೆಷ್ಟೋ ಪ್ರತಿಭೆಗಳು ಅವಕಾಶ ಸಿಗದೆ ಎಳೆಮರೆ ಕಾಯಿಯಂತಾಗಿದ್ದಾರೆ. ಇಲ್ಲಿ ಜೆಸಿಐ ಹುಟ್ಟಿನಿಂತ ಅಂತಹ ಪ್ರತಿಭೆಗಳಿಗೆ  ಉತ್ತಮ ವೇದಿಕೆ ಸಿಗಲಿದೆ ಎಂದು ಹೇಳಿದರು.

ಸಂಸೆ ಸೌಹಾರ್ಧ ಘಟಕದ ನೂತನ ಅಧ್ಯಕ್ಷರಾಗಿ ತೇಜಸ್ ಜೈನ್ ನೆಲ್ಲಿಬೀಡು ಅಧಿಕಾರ ವಹಿಸಿಕೊಂಡರು. ಕಾರ್ಯದರ್ಶಿ ಶೀತಲ್ ಬಿ.ಎಸ್,ಸಹಕಾರ್ಯದರ್ಶಿ ಅಂಕಿತಾ ಅರೋಶ್,ಖಜಾಂಚಿ ಶೃತೇಶ್, ಉಪಾಧ್ಯಕ್ಷರಾಗಿ ಅಪೇಕ್ಷ ಮಹಾವೀರ್,ಬದ್ರುದ್ಧೀನ್,ಸುರೇಶ್,ಪೂರ್ಣಿಮಾ ಪ್ರಶಾಂತ್,ಜಯಪ್ರಕಾಶ್ ಪ್ರಮಾಣ ವಚನ ಸ್ವೀಕರಿಸಿದರು.

ಈ ಸಂದರ್ಭದಲ್ಲಿ ಜೇಸಿಐ ಬೆಳಾಲ್ ಕೊಪ್ಪ ಆದ್ಯಕ್ಷ ಶ್ರೀಕಂಠ,ರಾಷ್ಟ್ರೀಯ ತರಭೇತುದಾರ ವಿಜಯಕುಮಾರ್ ಎನ್.ಕೆ,ಮಲೆನಾಡು ಅಭಿವೃದ್ಧಿ ಅಧಿಕಾರಿ ಶ್ರೇಣಿಕ್ ಜೈನ್,ವಿಜಯಕುಮಾರ್ ಶೆಟ್ಟಿ,ಸತೀಶ್ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News