ಚಿಕ್ಕಮಗಳೂರು: ನೀತಿ ಸಂಹಿತೆ ಉಲ್ಲಂಘನೆ ಆರೋಪ; ಜೆಡಿಎಸ್ ಅಭ್ಯರ್ಥಿ ವಿರುದ್ಧ ಬಿಜೆಪಿ ದೂರು
Update: 2018-04-12 22:43 IST
ಚಿಕ್ಕಮಗಳೂರು, ಎ.12: ಜೆಡಿಎಸ್ ಅಭ್ಯರ್ಥಿ ಬಿ.ಎಚ್.ಹರೀಶ್‍ರವರು ಚುನಾವಣಾ ಪ್ರಚಾರ ಕರಪತ್ರದಲ್ಲಿ ಕರಪತ್ರ ಮುದ್ರಣಗಾರರು ಯಾರು, ಎಷ್ಟು ಪ್ರತಿ ಎಂದು ನಮೂದಿಸದೆ ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಮಾಡಿದ್ದಾರೆ ಎಂದು ಜಿಲ್ಲಾ ಬಿಜೆಪಿ ಮುಖಂಡರು ಗುರುವಾರ ಚುನಾವಣಾಧಿಕಾರಿಗಳಿಗೆ ದೂರು ಸಲ್ಲಿಸಿದರು.
ಜೆಡಿಎಸ್ ಅಭ್ಯರ್ಥಿ ಬಿ.ಎಚ್.ಹರೀಶ್‍ರವರು 2018 ಚುನಾವಣಾ ವಿಧಾನಸಭಾ ಕ್ಷೇತ್ರದ ಪ್ರಮುಖ ಪ್ರಣಾಳಿಕೆ ಅಂಶ ಎಂಬ ಹಾಗೂ ವಾಗ್ದಾನ ನಮ್ಮದು, ತೀರ್ಮಾನ ನಿಮ್ಮದು ಎಂಬ ಘೋಷವಾಕ್ಯದೊಂದಿಗೆ ಬಣ್ಣದ ಕರಪತ್ರ ಮುದ್ರಿಸಿದ್ದು, ಕರಪತ್ರದಲ್ಲಿ ಮುದ್ರಣಗಾರರು ಯಾರು ಹಾಗೂ ಎಷ್ಟು ಸಂಖ್ಯೆಯ ಕರಪತ್ರ ಮುದ್ರಿಸಲಾಗಿದೆ ಎಂಬ ವಿವರ ನಮೂದಿಸಿಲ್ಲ. ಇದು ನೀತಿ ಸಂಹಿತೆ ಉಲ್ಲಂಘನೆಯಾಗಿದೆ. ಇದರ ವಿರುದ್ಧ ಕ್ರಮಕೈಗೊಳ್ಳುವಂತೆ ದೂರು ನೀಡಿದ್ದಾರೆ.
ಈ ಸಂದರ್ಭದಲ್ಲಿ ಬಿಜೆಪಿ ವಕ್ತಾರ ವೇಣುಗೋಪಾಲ್ ಸೇರಿದಂತೆ ಅನೇಕರು ಇದ್ದರು.