ಕಾಂಗ್ರೆಸ್ ಸರ್ಕಾರ ಗಿರಿಜನರ ಅಭಿವೃದ್ಧಿಗೆ ಹೆಚ್ಚಿನ ಒತ್ತನ್ನು ನೀಡಿದೆ: ಶಾಸಕ ಆರ್ ನರೇಂದ್ರ
ಹನೂರು,ಎ.12: ರಾಜ್ಯದಲ್ಲಿನ ಹಿಂದಿನ ಸರ್ಕಾರಗಳು ಗಿರಿಜನರ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಿರಲಿಲ್ಲ. ಆದರೆ ಕಳೆದ 5 ವರ್ಷದಲ್ಲಿ ಕಾಂಗ್ರೆಸ್ ಸರ್ಕಾರ ಗಿರಿಜನರ ಅಭಿವೃದ್ಧಿಗೆ ಹೆಚ್ಚಿನ ಒತ್ತನ್ನು ನೀಡಿದ್ದು, ಸಾಕಷ್ಟು ಅಭಿವೃದ್ದಿ ಮಾಡಲಾಗಿದೆ ಎಂದು ಶಾಸಕ ಆರ್ ನರೇಂದ್ರ ತಿಳಿಸಿದರು.
ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಕಗ್ಗಲಿಗುಂದಿ, ಬೋರೆದೊಡ್ಡಿ, ಕೌಳಿಹಳ್ಳ, ಜಡೇಸ್ವಾಮಿದೊಡ್ಡಿ ಹಾಗೂ ಸೇಬಿನ ಕೋಬೆಯಲ್ಲಿ ಗುರುವಾರ ಮತ ಪ್ರಚಾರದ ವೇಳೆ ಮಾತನಾಡಿದರು.
ಕ್ಷೇತ್ರ ವ್ಯಾಪ್ತಿಯಲ್ಲಿ 84 ಕ್ಕೂ ಹೆಚ್ಚು ಗಿರಿಜನರ ಹಾಡಿಗಳಿದ್ದು, ಇಲ್ಲಿನ ಜನರು ಕಳೆದ ಹಲವು ದಶಕಗಳಿಂದ ವಾಸಿಸುತ್ತಿದ್ದು, ಮೂಲ ಸೌಕರ್ಯದಿಂದ ವಂಚಿತರಾಗಿದ್ದರು. ಆದರೆ ರಾಜ್ಯದಲ್ಲಿನ ಹಿಂದಿನ ಸರ್ಕಾರಗಳು ಗಿರಿಜನರ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಿರಲಿಲ್ಲ. ಆದರೆ ಕಳೆದ 5 ವರ್ಷದಲ್ಲಿ ಕಾಂಗ್ರೆಸ್ ಸರ್ಕಾರ ಗಿರಿಜನರ ಅಭಿವೃದ್ಧಿಗೆ ಹೆಚ್ಚಿನ ಒತ್ತನ್ನು ನೀಡಿದ್ದು, ಎಸ್‍ಇಪಿ, ಟಿಎಸ್‍ಪಿ ಯೋಜನೆಯಡಿ 27,500 ಕೋಟಿ ರೂ ಅನುದಾನವನ್ನು ಮೀಸಲಿರಿಸಿ ಹಲವು ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲಾಗಿದೆ. ಈ ಅನುದಾನದಲ್ಲಿ ಕ್ಷೇತ್ರದ ಗಿರಿಜನರ ಹಾಡಿಗಳಲ್ಲಿ ಶೇಕಡ 90ರಷ್ಟು ಸಿಸಿ ರಸ್ತೆ, ಚರಂಡಿ ಹಾಗೂ ಮೂಲ ಸೌಕರ್ಯಕ್ಕೆ ಸಂಬಂಧಿಸಿದಂತೆ ಅಭಿವೃದ್ಧಿ ಕಾರ್ಯಗಳು ನಡೆದಿದೆ. ಅಲ್ಲದೇ 1650 ಗಿರಿಜನರಿಗೆ 2800 ಎಕರೆ ಜಮೀನು ಹಕ್ಕುಪತ್ರವನ್ನು ನೀಡುವುದರ ಮೂಲಕ ಹನೂರು ಕ್ಷೇತ್ರ ರಾಜ್ಯದಲ್ಲಿಯೇ ಮೊದಲನೇ ಸ್ಥಾನದಲ್ಲಿದೆ. ಆಗಾಗಿ ಕಾಂಗ್ರೆಸ್ ಸರ್ಕಾರದ ಸಾಧನೆಗಳನ್ನು ಒಮ್ಮೆ ಅವಲೋಕಿಸಿ ಈ ಬಾರಿ ನನ್ನನ್ನು ಜಯಗಳಿಸುವಂತೆ ಮನವಿ ಮಾಡಿದರು.
ಈ ಸಂದರ್ಭದಲ್ಲಿ ಜಿಪಂ ಮಾಜಿ ಉಪಾಧ್ಯಕ್ಷ ದೇವರಾಜು, ಗ್ರಾಪಂ ಅಧ್ಯಕ್ಷ ಲೊಕ್ಕನಹಳ್ಳಿ ರಂಗಶೆಟ್ಟಿ, ಟಿಎಪಿಸಿಎಂಎಸ್ ನಿರ್ದೇಶಕ ಚೆಲುವರಾಜು, ಮುಖಂಡರಾದ ರವಿ, ಸಿದ್ದರಾಜು, ಮಾದೇಗೌಡ, ಜಡೇಗೌಡ, ಮಾದೇಶ್‍ಹಾಗೂ ಇನ್ನಿತರರಿದ್ದರು.