ಕ್ಷಿಪಣಿ ದಾಳಿ...

Update: 2018-04-14 18:22 GMT

ಸಿರಿಯ ಸರಕಾರವು ಇತ್ತೀಚೆಗೆ ತನ್ನ ನಾಗರಿಕರ ಮೇಲೆ ರಾಸಾಯನಿಕ ಅಸ್ತ್ರಗಳನ್ನು ಪ್ರಯೋಗಿಸಿರುವುದಕ್ಕೆ ಪ್ರತೀಕಾರವಾಗಿ, ಅಮೆರಿಕ, ಫ್ರಾನ್ಸ್ ಮತ್ತು ಬ್ರಿಟನ್ ದೇಶಗಳು ಶನಿವಾರ ಮುಂಜಾನೆ ಸಿರಿಯ ಅಧ್ಯಕ್ಷ ಬಶರ್ ಅಲ್ ಅಸಾದ್‌ರ ರಾಸಾಯನಿಕ ಅಸ್ತ್ರಗಳ ನೆಲೆಗಳ ಮೇಲೆ ಸೇನಾ ದಾಳಿ ನಡೆಸಿದವು. ಈ ವಿಷಯವನ್ನು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಘೋಷಿಸಿದರು. ಸಿರಿಯ ವಿರುದ್ಧದ ಸೇನಾ ಕಾರ್ಯಾಚರಣೆಯನ್ನು ಘೋಷಿಸಲು ಟ್ರಂಪ್ ಶ್ವೇತಭವನದಲ್ಲಿ ಟೆಲಿವಿಶನ್ ಭಾಷಣ ಆರಂಭಿಸುತ್ತಿದ್ದಂತೆಯೇ, ಸಿರಿಯ ರಾಜಧಾನಿ ಡಮಾಸ್ಕಸ್‌ನಲ್ಲಿ ಭಾರೀ ಸ್ಫೋಟಗಳು ಕೇಳಿದವು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor