ರಾಮ ಮಂದಿರ ನಾಶಗೈದವರು ಭಾರತೀಯ ಮುಸ್ಲಿಮರಲ್ಲ: ಆರೆಸ್ಸೆಸ್ ಮುಖ್ಯಸ್ಥ ಮೋಹನ್ ಭಾಗವತ್

Update: 2018-04-16 07:58 GMT

ಮುಂಬೈ, ಎ.16: "ಅಯೋಧ್ಯೆಯ ರಾಮ ಮಂದಿರವನ್ನು 'ಹೊರಗಿನವರು' ನಾಶಗೊಳಿಸಿದ್ದರೇ ವಿನಃ ಭಾರತೀಯ ಮುಸ್ಲಿಮರಲ್ಲ'' ಎಂದು ಆರೆಸ್ಸೆಸ್ ಮುಖ್ಯಸ್ಥ ಮೋಹನ್ ಭಾಗವತ್ ಹೇಳಿದ್ದಾರೆ.  ರಾಮ ಮಂದಿರ ಮೂಲತಃ ಎಲ್ಲಿತ್ತೋ ಅಲ್ಲಿಯೇ ಅದನ್ನು ಮರು ನಿರ್ಮಿಸಲಾಗುವುದು ಎಂದು ಸ್ಪಷ್ಟ ಪಡಿಸಿದ್ದಾರೆ.

ಮಹಾರಾಷ್ಟ್ರದ ಪಾಲ್ಘರ್ ಜಿಲ್ಲೆಯ ದಹಾನು ಎಂಬಲ್ಲಿ ನಡೆದ ವಿರಾಟ್ ಹಿಂದೂ ಸಮ್ಮಳೇನದಲ್ಲಿ ಮಾತನಾಡಿದ ಭಾಗವತ್ ಮೇಲಿನಂತೆ ಹೇಳಿದ್ದಾರೆ. "ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣವಾಗದೇ ಇದ್ದಲ್ಲಿ ನಮ್ಮ ಸಂಸ್ಕೃತಿಯ ಬೇರು ತುಂಡಾಗುವುದು" ಎಂದು ತಿಳಿಸಿದರು.

"ಭಾರತದ ಮುಸ್ಲಿಂ ಸಮುದಾಯ ರಾಮ ಮಂದಿರವನ್ನು ನಾಶ ಪಡಿಸಿಲ್ಲ, ಭಾರತೀಯರು ಇಂತಹ ಕೆಲಸ ಮಾಡಲು ಸಾಧ್ಯವಿಲ್ಲ, ಇದು ಹೊರನಗಿನವರ ಕೃತ್ಯ. ಅದನ್ನು  ಮರು ನಿರ್ಮಿಸುವುದು ನಮ್ಮ ಜವಾಬ್ದಾರಿ'' ಎಂದು ಹೇಳಿದ ಭಾಗವತ್, ಹಿಂದೂಗಳನ್ನು ಮತಾಂತರಗೊಳಿಸಲು ಕೆಲ ಧಾರ್ಮಿಕ ಗುಂಪುಗಳನ್ನು ಯತ್ನಿಸುತ್ತಿದೆ ಎಂದು ಆರೋಪಿಸಿದರು.

"ಎಲ್ಲಾ ಧರ್ಮಗಳ ಸಾರವೂ ಒಂದೇ ಎಂದು ಹೇಳುವಾಗ ಜನರನ್ನು ಮತಾಂತರಗೊಳ್ಳಲು ಹೇಳುತ್ತಿರುವುದೇಕೆ ?, ಧರ್ಮದ ವಿಚಾರ ಬಂದಾಗ ಹಿಂದೂಗಳು ಹೋರಾಟಕ್ಕೆ ಸಜ್ಜಾಗಬೇಕೆಂದು ನಾನು ಹೇಳುತ್ತೇನೆ. ಕೆಲವರ ಸಿಹಿ ಮಾತುಗಳ ಬಗ್ಗೆ ಹಿಂದೂಗಳು ಜಾಗೃತರಾಗಬೇಕು'' ಎಂದು ಭಾಗವತ್ ಹೇಳಿದರು.

ತಮ್ಮ ಜೀವಮಾನದ ಮೂರನೇ ಒಂದು ಭಾಗದಷ್ಟು ಸಮಯವನ್ನು ದೇಶಕ್ಕಾಗಿ ಶ್ರಮಿಸಬೇಕು ಎಂದ ಭಾಗವತ್ ``ಯಾರ ಅಂಗಡಿಗಳು ಮುಚ್ಚಲ್ಪಟ್ಟಿದೆಯೋ (ಕಳೆದ ಚುನಾವಣೆಗಳಲ್ಲಿ ಸೋತವರು),  ಈಗ ಜಾತಿ ವಿಚಾರದಲ್ಲಿ ಕಲಹ ಸೃಷ್ಟಿಸುತ್ತಿದ್ದಾರೆ' ಎಂದು ಹೇಳಿದರು.

ಸ್ವಾಮಿ ಸಚ್ಚಿದಾನಂದ ಮಹಾರಾಜ್, ಬಾಲಯೋಗಿ ಸದಾನಂದ ಬಾಬ ಮಹಾರಾಜ್,  ವಿಹಿಂಪ ವಿಶ್ವ ಸಮನ್ವಯ ಉಸ್ತುವಾರಿ ಅಶೋಕ್ ಚೌಘುಲೆ,  ಸಂಘಟನಾ ಕಾರ್ಯದರ್ಶಿ ಪಶಾಂತ್ ಹರ್ತಾಳ್ಕರ್, ಅಖಿಲ ಭಾರತ ಸತ್ಸಂಗ ಪ್ರಮುಖ್ ದಾದ ವೇದಕ್ ಮುಂತಾದವರು  ಸಮ್ಮೇಳನದಲ್ಲಿ ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News