×
Ad

ಗಂಗಾವತಿ: ಕನಕಗಿರಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ದಡೇಸೂಗೂರು ಬಸವರಾಜ ನಾಮಪತ್ರ ಸಲ್ಲಿಕೆ

Update: 2018-04-20 16:39 IST

ಗಂಗಾವತಿ,ಎ.20: ಕನಕಗಿರಿ ಕ್ಷೇತ್ರಕ್ಕೆ ಭಾರತೀಯ ಜನತಾ ಪಾರ್ಟಿ ಅಭ್ಯರ್ಥಿಯಾಗಿ ದಡೇಸೂಗೂರು ಬಸವರಾಜ ಶುಕ್ರವಾರ ನಾಮಪತ್ರ ಸಲ್ಲಿಸಿದರು. 

ನಗರದ ಶ್ರೀಚನ್ನಬಸವಸ್ವಾಮಿ ದೇವಾಲಯದಿಂದ ಬಿಜೆಪಿ ಅಭಿಮಾನಿಗಳು ಮತ್ತು ಕಾರ್ಯಕರ್ತರ ಜತೆ ಮೆರವಣಿಗೆಯಲ್ಲಿ ಆಗಮಿಸಿ ತಮ್ಮ ಉಮೇದುವಾರಿಕೆ ಸಲ್ಲಿಸಿದರು. 

ಈ ಸಂದರ್ಭದಲ್ಲಿ ಅವರು ಮಾತನಾಡಿ, ಕನಕಗಿರಿ ಕ್ಷೇತ್ರದಲ್ಲಿ ಶಾಸಕ ಶಿವರಾಜ್ ತಂಗಡಗಿ ವ್ಯಾಪಕ ಭ್ರಷ್ಟಾಚಾರ ನಡೆಸುವ ಮೂಲಕ ಹಣ ಸಂಪಾದನೆ ಮಾಡಿ ಚುನಾವಣೆ ಗೆಲ್ಲುವ  ಕುತಂತ್ರ ನಡೆಸುತ್ತಿದ್ದಾರೆ. ಚುನಾವಣಾಧಿಕಾರಿಗಳು ಕನಕಗಿರಿ ಕ್ಷೇತ್ರದಲ್ಲಿ ಸೂಕ್ತ ಬಂದೋಬಸ್ತ್ ವ್ಯವಸ್ಥೆ ಮಾಡಿ ಚುನಾವಣೆ ನಡೆಸಬೇಕು. ಕೆರೆ ಭರ್ತಿ ಮಾಡುವ ನೆಪದಲ್ಲಿ ಕೋಟ್ಯಾಂತರ ರೂ.ಹಣ ತಂಗಡಗಿ ಮನೆ ಸೇರಿದೆ. ಇದರ ವಿರುದ್ಧ ಕ್ಷೇತ್ರದ ಮತದಾರ ಚುನಾವಣೆಯಲ್ಲಿ ಸೂಕ್ತ ಉತ್ತರ ನೀಡಲಿದ್ದಾರೆ. ಮುಂದಿನ ಸರಕಾರ ಬಿಜೆಪಿ ಪಕ್ಷದ್ದಾಗಿರುತ್ತದೆ. ಕನಕಗಿರಿ ಕ್ಷೇತ್ರದ ಅಭಿವೃದ್ಧಿಗೆ ಪೂರಕ ಯೋಜನೆ ರೂಪಿಸಲಾಗುತ್ತದೆ ಎಂದರು.

ಈ ಸಂದರ್ಭದಲ್ಲಿ ಮಾಜಿ ಸಚಿವ ಸಾಲೋಣಿ ನಾಗಪ್ಪ, ಜಿ.ಪಂ.ಸದಸ್ಯೆ ಸ್ವಾತಿ ರಾಮಮೋಹನರಾವ್ ಸೇರಿ ಅನೇಕರಿದ್ದರು.

 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News