ಕರ್ನಾಟಕ ಚುನಾವಣೆ : ಬಿಜೆಪಿ ಮೂರನೇ ಪಟ್ಟಿ ಪ್ರಕಟ

Update: 2018-04-20 13:22 GMT

ಬೆಂಗಳೂರು, ಎ. 20: ಕಾಂಗ್ರೆಸ್ ತೊರೆದು ಇಂದು ಬೆಳಗ್ಗೆಯಷ್ಟೇ ಬಿಜೆಪಿಗೆ ಸೇರಿದ ಎನ್.ವೈ.ಗೋಪಾಲಕೃಷ್ಣ, ಮಾಜಿ ಸಚಿವ ವಿ.ಸೋಮಣ್ಣ ಅವರ ಪುತ್ರ ಅರುಣ್ ಸೇರಿದಂತೆ 59 ಅಭ್ಯರ್ಥಿಗಳ ಮೂರನೆ ಪಟ್ಟಿಯನ್ನು ಬಿಜೆಪಿ ಬಿಡುಗಡೆ ಮಾಡಿದೆ.

ರಾಜ್ಯ ರಾಜಕೀಯದಲ್ಲಿ ಅತ್ಯಂತ ಮಹತ್ವ ಹಾಗೂ ಕುತೂಹಲ ಮೂಡಿಸಿರುವ ಮೈಸೂರಿನ ವರುಣಾ, ಬಾಗಲಕೋಟೆಯ ಬಾದಾಮಿ, ಬೆಂಗಳೂರಿನ ಯಶವಂತಪುರ, ರಾಮನಗರ, ಕನಕಪುರ, ಬಿಟಿಎಂ ಲೇಔಟ್ ಕ್ಷೇತ್ರಗಳಿಗೆ ಬಿಜೆಪಿ ಅಭ್ಯರ್ಥಿಗಳನ್ನು ಘೋಷಣೆ ಮಾಡಿಲ್ಲ.

ಪುತ್ರಿಗೆ ಟಿಕೆಟ್: ಕೆಜಿಎಫ್ ಕ್ಷೇತ್ರದಿಂದ ವೈ.ಸಂಪಂಗಿ ಬದಲಿಗೆ ಅವರ ಪುತ್ರಿ ಅಶ್ವಿನಿಗೆ ಟಿಕೆಟ್ ಬದಲಾವಣೆ ಮಾಡಲಾಗಿದೆ. ಈಗಾಗಲೇ ಮೊದಲ ಪಟ್ಟಿಯಲ್ಲಿ 72, ಎರಡನೆ ಪಟ್ಟಿ-82, ಇದೀಗ 59 ಅಭ್ಯರ್ಥಿಗಳ ಮೂರನೆ ಪಟ್ಟಿ ಸೇರಿ ಒಟ್ಟು 213 ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ.

ಅಭ್ಯರ್ಥಿಗಳ ಪಟ್ಟಿ: ಬೆಳಗಾವಿ ಉತ್ತರ-ಬಿ.ಅನಿಲ್, ಬೆಳಗಾವಿ ದಕ್ಷಿಣ- ಅಭಯ್ ಪಾಟೀಲ್, ಖಾನಾಪುರ-ವಿಠ್ಠಲ್ ಹಲಗೇಕರ್, ಕಿತ್ತೂರು-ಮಹಾಂತೇಶ್ ದೊಡ್ಡ ಗೌಡರ್, ಬಸವನಬಾಗೇವಾಡಿ-ಸಂಗರಾಜ್ ದೇಸಾಯಿ, ನಾಗಠಾಣ(ಎಸ್ಸಿ)- ಡಾ. ಗೋಪಾಲ್ ಕಾರಜೋಳ, ಚಿತ್ತಾಪುರ(ಎಸ್ಸಿ)-ವಾಲ್ಮೀಕಿ ನಾಯಕ್, ಚಿಂಚೋಳಿ(ಎಸ್ಸಿ) -ಸುನೀಲ್ ವಲ್ಯಾಪುರೆ, ಗುಲ್ವರ್ಗಾ ಗ್ರಾಮಾಂತರ(ಎಸ್ಸಿ)-ಬಸವರಾಜ್ ಮತ್ತಿಮೋಳ್.

ಹುಮ್ನಾಬಾದ್-ಸುಭಾಶ್ ಕಲ್ಲೂರ್, ಬೀದರ್ ದಕ್ಷಿಣ-ಡಾ. ಸೈಲೇಂದ್ರ ಬೆಳ್ದಾಲೆ, ಮಾನ್ವಿ(ಎಸ್ಟಿ)-ಮಾನಪ್ಪ ನಾಯಕ್, ಸಿಂಧನೂರು-ಕೊಲ್ಲ ಶೇಷಗಿರಿರಾವ್, ಕುಂದಗೋಳ-ಎಸ್.ಐ.ಚಿಕ್ಕಣ್ಣಗೌಡರ್, ಹುಬ್ಬಳ್ಳಿ-ಧಾರವಾಡ ಈಶಾನ್ಯ(ಎಸ್ಸಿ)- ಚಂದ್ರಶೇಖರ್ ಗೋಕಾಕ್, ಕುಮಟಾ-ದಿನಕರ್ ಶೆಟ್ಟಿ, ಹಾವೇರಿ(ಎಸ್ಸಿ) ನೆಹರೂ ಓಲೇಕಾರ್, ರಾಣೆಬೆನ್ನೂರು-ಡಾ.ಬಸವರಾಜ್ ಕೆಲ್ಗಾರ್.

ಕೂಡ್ಲಿಗಿ-ಎನ್.ವೈ.ಗೋಪಾಲಕೃಷ್ಣ, ಜಗಲೂರು-ಎಸ್.ವಿ.ರಾಮಚಂದ್ರ, ಹರಪ್ಪನಹಳ್ಳಿ-ಕರುಣಾಕರ ರೆಡ್ಡಿ, ಹರಿಹರ-ಬಿ.ಪಿ.ಹರೀಶ್, ದಾವಣಗೆರೆ ದಕ್ಷಿಣ- ಯಶವಂತರಾವ್ ಜಾಧವ್, ಮಾಯಕೊಂಡ-ಪ್ರೊ.ಲಿಂಗಣ್ಣ, ಉಡುಪಿ- ಕೆ. ರಘುಪತಿ ಭಟ್, ಕಾಪು-ಲಾಲಾಜಿ ಮೆಂಡನ್, ಮೂಡಿಗೆರೆ-ಎಂ.ಪಿ. ಕುಮಾರಸ್ವಾಮಿ, ತರೀಕೆರೆ-ಡಿ.ಎಸ್.ಸುರೇಶ್, ಕುಣಿಗಲ್-ಡಿ.ಕೃಷ್ಣಕುಮಾರ್, ಪಾವಗಡ-ಜಿ.ವಿ. ಬಲರಾಮ್, ಗೌರಿಬಿದನುರು-ಜೈಪಾಲ್ ರೆಡ್ಡಿ, ಬಾಗೇಪಲ್ಲಿ-ಸಾಯಿಕುಮಾರ್, ಚಿಂತಾಮಣಿ-ಎಂ.ಶಂಕರ್, ಶ್ರೀನಿವಾಸಪುರ-ವೆಂಕಟೇಗೌಡ, ಮುಳಬಾಗಲು-ಅಮರೀಶ್.

ಪುಲಕೇಶಿನಗರ-ಸುಶೀಲಾ ದೇವರಾಜ್, ಸರ್ವಜ್ಞ ನಗರ-ಎಂ.ಎನ್.ರೆಡ್ಡಿ, ಗಾಂಧಿನಗರ-ಸಪ್ತಗಿರಿ ಗೌಡ, ಚಾಮರಾಜಪೇಟೆ-ಎಂ.ಲಕ್ಷ್ಮಿನಾರಾಯಣ, ದೇವನಹಳ್ಳಿ- ಕೆ.ನಾಗೇಶ್, ನೆಲಮಂಗಲ-ಎಂ.ವಿ.ನಾಗರಾಜ್, ಮದ್ದೂರು- ಸತೀಶ್, ಮೇಲುಕೋಟೆ-ಎಚ್.ಮಂಜುನಾಥ್, ಮಂಡ್ಯ-ಬಸವೇಗೌಡ, ನಾಗಮಂಗಲ- ಡಾ.ಪಾರ್ಥ ಸಾರಥಿ, ಕೆ.ಆರ್.ಪೇಟೆ-ಬಿ.ಮಂಜುನಾಥ್, ಶ್ರವಣಬೆಳಗೊಳ- ಶಿವನಂಜೇಗೌಡ, ಅರಸೀಕೆರೆ- ಡಾ.ಅರುಣ್ ಸೋಮಣ್ಣ, ಹೊಳೆನರಸೀಪುರ- ಎಚ್.ರಾಜುಗೌಡ.

ಮಂಗಳೂರು ಉತ್ತರ-ಡಾ.ಭರತ್ ಶೆಟ್ಟಿ, ಮಂಗಳೂರು ದಕ್ಷಿಣ-ವೇದವ್ಯಾಸ್ ಕಾಮತ್, ಮಂಗಳೂರು-ಸಂತೋಷ್ ಕುಮಾರ್ ರೈ, ವಿರಾಜಪೇಟೆ-ಕೆ.ಜಿ. ಬೋಪಯ್ಯ, ಕೆ.ಆರ್.ನಗರ-ಶ್ವೇತಾಗೋಪಾಲ್, ಹುಣಸೂರು-ರಮೇಶ್ ಕುಮಾರ್, ಚಾಮುಂಡೇಶ್ವರಿ-ಗೋಪಾಲ್‌ರಾವ್, ಕೃಷ್ಣರಾಜ-ಎಸ್.ಎ. ರಾಮದಾಸ್, ಚಾಮರಾಜ-ಎಲ್.ನಾಗೇಂದ್ರ, ಟೀ.ನರಸೀಪುರ-ಎಸ್.ಶಂಕರ್.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News