×
Ad

ಚಿಕ್ಕಮಗಳೂರು: ಒಂದೇ ದಿನ 18 ನಾಮಪತ್ರ ಸಲ್ಲಿಕೆ

Update: 2018-04-20 23:15 IST

ಚಿಕ್ಕಮಗಳೂರು, ಎ.20: ವಿಧಾನಸಭೆ ಚುನಾವಣೆ ಹಿನ್ನೆಲೆ ಜಿಲ್ಲಾದ್ಯಂತ ಶುಕ್ರವಾರ ಒಟ್ಟು ವಿವಿಧ ಪಕ್ಷಗಳ ಹಾಗೂ ಪಕ್ಷೇತರರು 18 ಅಭ್ಯರ್ಥಿಗಳು ನಾಮಪತ್ರಗಳನ್ನು ಸಲ್ಲಿಸಿದ್ದಾರೆ.

ಶೃಂಗೇರಿ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಪ್ರವೀಣ್ ಖಾಂಡ್ಯ ಸಲ್ಲಿಸಿದ್ದರೆ, ಮೂಡಿಗೆರೆ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಮೋಟಮ್ಮ, ಪಕ್ಷೇತರ ಅಭ್ಯರ್ಥಿ ಮುನಿಯಾಬೋವಿ, ಬಿಜೆಪಿ ಅಭ್ಯರ್ಥಿ ಎಂ.ಪಿ.ಕುಮಾರಸ್ವಾಮಿ ನಾಮಪತ್ರ ಸಲ್ಲಿಸಿದರು.

ಚಿಕ್ಕಮಗಳೂರು ಕ್ಷೇತ್ರದಿಂದ ಶಾಸಕ ಸಿ.ಟಿ.ರವಿ, ಪಕ್ಷೇತರ ಅಭ್ಯರ್ಥಿಗಳಾಗಿ ಮುನಿಯಾಬೋವಿ, ಎಚ್.ಡಿ.ರೇವಣ್ಣ, ಬಿ.ಎಂ. ಜಯಕುಮಾರ್, ಮನ್ಸೂರ್ ಅಹ್ಮದ್, ಪಕ್ಷೇತರ ಅಭ್ಯರ್ಥಿ ಕೆ.ಆರ್.ರಾಮಶೆಟ್ಟಿ, ಪೃಥ್ವಿರಾಜ್  ನಾಮಪತ್ರ ಸಲ್ಲಿಸಿದರು.

ತರೀಕೆರೆ ಕೇತ್ರದಿಂದ ಬಿಜೆಪಿಯಿಂದ ಡಿ.ಎನ್.ಸುರೇಶ್ ಬಿಜೆಪಿ, ಜೆಡಿಎಸ್ ಟಿ.ಎಚ್. ಶಿವಶಂಕರಪ್ಪ, ಪಕ್ಷೇತರ ಅಭ್ಯರ್ಥಿಗಳಾಗಿ ಶ್ರೀನಾಥ್, ಟಿ.ಎಂ.ಶಿವಶಂಕರಪ್ಪ ನಾಮಪತ್ರ ಸಲ್ಲಿಸಿದರು.

ಕಡೂರು ಕ್ಷೇತ್ರದಿಂದ ಜೆಡಿಎಸ್‍ನ ವೈಎಸ್‍ವಿ ದತ್ತ, ಪಕ್ಷೇತರ ಅಭ್ಯರ್ಥಿಗಳಾಗಿ ಜಿ.ಎರದಕೆರೆ ಕಾಂತದಾಜ್, ರುದ್ರೇಶ್ ನಾಮಪತ್ರ ಸಲ್ಲಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News