ಮಡಿಕೇರಿ: ಭಾರೀ ಗಾಳಿ ಮಳೆ; ಮರ ಬಿದ್ದು ಮನೆಗಳಿಗೆ ಹಾನಿ

Update: 2018-04-20 17:49 GMT

ಮಡಿಕೇರಿ,ಎ.20: ನಾಪೋಕ್ಲು ಸಮೀಪದ ಕಕ್ಕಬ್ಬೆ ಗ್ರಾ.ಪಂ ವ್ಯಾಪ್ತಿಯ ಮರಂದೋಡ ಗ್ರಾಮದಲ್ಲಿ ಶುಕ್ರವಾರ ಸುರಿದ ಭಾರೀ ಗಾಳಿ ಮಳೆಗೆ ಎರಡು ಮನೆಗಳ ಶೀಟುಗಳ ಮೇಲೆ ಮರ ಬಿದ್ದು ಅಪಾರ ನಷ್ಟ ಸಂಭವಿಸಿದೆ.

ಗ್ರಾಮದ ಸಹೋದರರಾದ ಬಾರಿಕೆ ಮನೆ ಸೋಮಯ್ಯ ಮತ್ತು ಈರಪ್ಪ ವಾಸವಾಗಿದ್ದ ಮನೆಯ ಶೀಟು ಹೊದಿಕೆಗಳ ಮೇಲೆ ದೊಡ್ಡ ಗಾತ್ರದ ಬಳಂಜಿ ಮರ ಮುರಿದು ಬಿದ್ದು ಹಾನಿ ಉಂಟಾಗಿದೆ. ಮನೆ ಮಂದಿ ಕೆಲಸಕ್ಕೆ ತೆರಳಿದ್ದುದರಿಂದ ಪ್ರಾಣಾಪಾಯದಿಂದ ಪಾರಾಗಿದ್ದಾರೆ. 

ಮನೆಯಲ್ಲಿದ್ದ ವಸ್ತುಗಳು ಸಂಪೂರ್ಣ ಹಾನಿಗೊಳಗಾಗಿವೆ. ಸ್ಥಳಕ್ಕೆ ಗ್ರಾ.ಪಂ ಸದಸ್ಯರಾದ ಮುಕ್ಕಾಟಿರ ರಮೇಶ್ ಹಾಗೂ ಚಂಡೀರ ಜಗದೀಶ್ ಇನ್ನಿತರರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. 

ಮರಂದೋಡ ಗ್ರಾಮದ ಚೋಯಮಾಡಂಡ ಕರುಂಬಯ್ಯ ಅವರ ಮನೆಯ ಮೇಲೆ ಬಳಂಜಿ ಮರ ಹಾಗೂ ಮುಕ್ಕಾಟಿರ ಬೋಜಪ್ಪ ಅವರ ಮನೆ ಮೇಲೆ ಅಡಿಕೆ ಮರ ಮುರಿದು ಬಿದ್ದು ನಷ್ಟ ಸಂಭವಿಸಿದೆ. ಸುತ್ತಮುತ್ತಲಿನ ತೋಟಗಳಲ್ಲಿ ಅಧಿಕ ಸಂಖ್ಯೆಯ ಮರಗಳು ಮುರಿದುಬಿದ್ದಿರುವುದಾಗಿ ವರದಿಯಾಗಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News