ಹನೂರು ಕ್ಷೇತ್ರದ ಬಿಎಸ್‍ಪಿ-ಜೆಡಿಎಸ್ ಮೈತ್ರಿಕೂಟದ ಅಭ್ಯರ್ಥಿಯಾಗಿ ಆರ್.ಮಂಜುನಾಥ್ ಕಣಕ್ಕೆ

Update: 2018-04-21 16:38 GMT

ಹನೂರು,ಎ.21: ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ಬಿಎಸ್‍ಪಿ ಮತ್ತು ಜೆಡಿಎಸ್ ಮಹಾ ಮೈತ್ರಿಕೂಟದಿಂದ ಹನೂರು ಕ್ಷೇತ್ರದಲ್ಲಿ ಜೆಡಿಎಸ್‍ನ ಅಭ್ಯರ್ಥಿಯಾದ ಆರ್ ಮಂಜುನಾಥ್ ಕಣಕ್ಕಿಳಿಯಲ್ಲಿದ್ದು , ಕ್ಷೇತ್ರದ ಬಿಎಸ್‍ಪಿ ಕಾರ್ಯಕರ್ತರು ಮತ್ತು ಮುಖಂಡರು ಸೋಮವಾರದಿಂದ ಇವರ ಪರವಾಗಿ ಕ್ಷೇತ್ರದಲ್ಲಿ ಮತಯಾಚನೆ ಮಾಡಲಿದ್ದಾರೆ ಎಂದು ಬಿಎಸ್‍ಪಿ ರಾಜ್ಯ ಕಾರ್ಯದರ್ಶಿಯಾದ ಎಂ ಪಂಚಾಕ್ಷರಿ ತಿಳಿಸಿದರು.

ಹನೂರು ಪಟ್ಟಣದ ಹೊರ ವಲಯದ ಎಂ ಪಂಚಾಕ್ಷರಿರವರ ತೋಟದ ಮನೆಯಲ್ಲಿ ಕರೆಯಲಾಗಿದ್ದ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು, 
ಸ್ಚಾತಂತ್ರ ಬಂದು ಇಷ್ಟು ವರ್ಷವಾದರೂ ಕ್ಷೇತ್ರ ತೀರಾ ಹಿಂದುಳಿದಿರುವುದು ಒಂದು ದುರಂತ. ಹಿಂದೆ ಅಧಿಕಾರ ಅನುಭವಿಸಿದ ಶಾಸಕರು ಹಲವು ಗ್ರಾಮಗಳಿಗೆ ಮೂಲ ಭೂತಸೌಕರ್ಯಗಳನ್ನು ಒದಗಿಸಿಲ್ಲ. ಸರಿಯಾದ ರಸ್ತೆ  ಇಲ್ಲದೆ, ವಿದ್ಯುತ್ ದೀಪದ ವವ್ಯಸ್ಥೆಯೂ ಸಿಗದೇ ಇನ್ನೂ ಸಹ ಹಲವು ಗ್ರಾಮಗಳು ಕತ್ತಲೆಯಿಂದ ಕೂಡಿದೆ. ಈ ಕ್ಷೇತ್ರದ ಅಭಿವೃದ್ದಿಯ ಜೊತೆಗೆ ಯುವಕರಿಗೆ ಸ್ಥಳೀಯವಾಗಿ ಒಂದು ಉದ್ಯೋಗ ಒದಗಿಸುವುದು ಮತ್ತು ಕ್ಷೇತ್ರದಲ್ಲಿ ಒಂದು ಕೈಗಾರಿಕೆಯನ್ನು ಸ್ಥಾಪಿಸುವ ಕಾರ್ಯಕ್ಕೆ ಮುಂದಾಗಲಿಲ್ಲ. ಕೆಲವು ಗ್ರಾಮಸ್ಥರು ಉದ್ಯೋಗವನ್ನು ಹರಸಿ ನೆರೆಯ ರಾಜ್ಯಗಳಿಗೆ ಹೋಗುವುದನ್ನು ತಡೆಯುವಲ್ಲಿ ಹಿಂದಿನ ಶಾಸಕರುಗಳು ವಿಫಲರಾಗಿದ್ದಾರೆ. ಹಾಲಿ ಮತ್ತು ಮಾಜಿ ಶಾಸಕರು ಒಳ ಒಪ್ಪಂದದ ರಾಜಕೀಯವನ್ನು ಮಾಡುತ್ತಿದ್ದಾರೆ. ಕ್ಷೇತ್ರದ ಜನತೆ ಇದನ್ನು ಅರಿತಿದ್ದು, ಈ ಭಾರಿ ಚುನಾವಣೆಯಲ್ಲಿ ಅವರಿಗೆ ತಕ್ಕ ಪಾಠ ಕಲಿಸಿ ಮೂರನೇ ಶಕ್ತಿಯಾದ ಮಂಜುನಾಥ್‍ರವರನ್ನು 20ಸಾವಿರ ಅಂತರದಲ್ಲಿ ಗೆಲ್ಲಿಸಿ, ರಾಜ್ಯದಲ್ಲಿ ಕುಮಾರಸ್ವಾಮಿಯವರನ್ನು ಮುಖ್ಯಮಂತ್ರಿ ಮಾಡಲಿದ್ದಾರೆ ಎಂದು ತಿಳಿಸಿದರು  

ಇದೇ ಸಂದರ್ಭದಲ್ಲಿ ಮುಖಂಡರಾದ ಹನೂರು ಕ್ಷೇತ್ರದ ಬಿಎಸ್‍ಪಿ ಅದ್ಯಕ್ಷರಾದ ಮಹೇಶ್ ಮುಖಂಡರಾದ ಸಿದ್ದರಾಜು, ನಂದೀಶ್, ನಟರಾಜು ಇನ್ನಿತರರು ಹಾಜರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News