ಸಂಸ್ಕೃತವು 'ಆಲ್ಗರಿದಂ'ಗಳನ್ನು ಬರೆಯಲು, ಯಂತ್ರಕಲಿಕೆಗೆ ಸೂಕ್ತ ಭಾಷೆ: ರಾಷ್ಟ್ರಪತಿ ಕೋವಿಂದ್

Update: 2018-04-22 10:22 GMT

ಹೊಸದಿಲ್ಲಿ, ಎ.22: ಸಂಸ್ಕೃತ ಕೇವಲ ಆಧ್ಯಾತ್ಮ, ತತ್ವಶಾಸ್ತ್ರ ಅಥವಾ ಸಾಹಿತ್ಯಕ್ಕೆ ಸೀಮಿತವಲ್ಲ. 'ಆಲ್ಗರಿದಂ'ಗಳನ್ನು ಬರೆಯಲು, ಯಂತ್ರಕಲಿಕೆ ಹಾಗು ಕೃತಕ ಬುದ್ಧಿಮತ್ತೆಗೆ ಸಂಸ್ಕೃತ ಅತ್ಯಂತ ಸೂಕ್ತ ಭಾಷೆ ಎನ್ನುವುದು ತಜ್ಞರ ಅಭಿಮತ ಎಂದು ರಾಷ್ಟ್ರಪತಿ ರಾಮನಾಥ್ ಕೋವಿಂದ್ ನುಡಿದರು.

ಶ್ರೀ ಲಾಲ್‍ಹಬದ್ದೂರ್ ಶಾಸ್ತ್ರಿ ರಾಷ್ಟ್ರೀಯ ಸಂಸ್ಕೃತ ವಿದ್ಯಾಪೀಠದಲ್ಲಿ 17ನೇ ಘಟಿಕೋತ್ಸವ ಭಾಷಣ ಮಾಡಿದ ಅವರು, "ಬೌದ್ಧಿಕ ಪ್ರಗತಿಯ ಪಯಣದಲ್ಲಿ ಸಂಸ್ಕೃತ ಭಾಷೆ, ಸಾಹಿತ್ಯ ಮತ್ತು ವಿಜ್ಞಾನ ಅತ್ಯಂತ ಪರಿಣಾಮಕಾರಿ ಮೈಲುಗಲ್ಲು. ಭಾರತದ ಹೃದಯ, ಸಂಸ್ಕøತ ಭಾಷೆಯಲ್ಲಿ ಪ್ರತಿಫಲನಗೊಂಡಿದೆ. ಇದು ಹಲವು ಭಾಷೆಗಳ ತಾಯಿ" ಎಂದು ವಿಶ್ಲೇಷಿಸಿದರು.

ಸಂಸ್ಕೃತ ಭಾಷೆಯಲ್ಲಿ ಲಭ್ಯವಿರುವ ಜ್ಞಾನದ ಪ್ರಸಾರ, ವಿಶ್ವಕಲ್ಯಾಣಕ್ಕೆ ಸಾಧನ ಎನ್ನುವುದು ಮಹತ್ವದ ವಿಚಾರ. ಸಂಸ್ಕೃತ ಭಾಷೆಯ ಕೃತಿಗಳು ಕೇವಲ ಆಧ್ಯಾತ್ಮ, ತತ್ವಶಾಸ್ತ್ರ, ಭಕ್ತಿ, ಸಂಪ್ರದಾಯ ಅಥವಾ ಸಾಹಿತ್ಯಕ್ಕೆ ಮಾತ್ರ ಸೀಮಿತವಲ್ಲ. ಇದು ಜ್ಞಾನ ಮತ್ತು ವಿಜ್ಞಾನದ ಭಾಷೆ. ಆರ್ಯಭಟ, ವರಾಹಮಿಹಿರ, ಭಾಸ್ಕರ, ಚರಕ ಮತ್ತು ಸುಶ್ರುತ ಅವರಂಥ ಖ್ಯಾತ ವಿಜ್ಞಾನಿಗಳು ಹಾಗೂ ಗಣಿತಜ್ಞರು ಸಂಸ್ಕೃತದಲ್ಲಿ ಕೃತಿಗಳನ್ನು ರಚಿಸಿದ್ದಾರೆ ಎಂದು ಬಣ್ಣಿಸಿದರು.

ಯೋಗದಿನಾಚರಣೆಯನ್ನು ಜೂನ್ 21ರಂದು ಆಚರಿಸಲಾಗುತ್ತಿದ್ದು, ಆಯುರ್ವೇದ ಕೂಡಾ ಜನಪ್ರಿಯವಾಗುತ್ತಿದೆ. ಈ ಎಲ್ಲ ಜ್ಞಾನಗಳು ಮೂಲಭೂತವಾಗಿ ಲಭ್ಯವಿರುವುದು ಕೇವಲ ಸಂಸ್ಕೃತದಲ್ಲಿ ಮಾತ್ರ ಎಂದವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News