ಚಿಕ್ಕಮಗಳೂರು: ಜೆಡಿಎಸ್ ಅಭ್ಯರ್ಥಿ ಗೆಲುವಿಗಾಗಿ ಬಾಬಾಬುಡನ್‍ಗಿರಿಯಲ್ಲಿ ಪ್ರಾರ್ಥನೆ

Update: 2018-04-24 16:41 GMT

ಚಿಕ್ಕಮಗಳೂರು, ಎ.22: ಬಾಬಾಬುಡಾನ್ ದರ್ಗಾಕ್ಕೆ ಭೇಟಿ ನೀಡಿ ಪಾದುಕೆಗಳ ದರ್ಶನ ಪಡೆದ ಜೆಡಿಎಸ್‍ನ ಅಭ್ಯರ್ಥಿ ಬಿ.ಎಚ್.ಹರೀಶ್ ತೆಂಗಿನಕಾಯಿ ಒಡೆದು ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿಗಳ ಗೆಲುವಿಗಾಗಿ ಪ್ರಾರ್ಥನೆ ಮಾಡಿದರು.

ನಂತರ ಜೆಡಿಎಸ್ ನ ಅಭ್ಯರ್ಥಿ ಬಿ.ಹೆಚ್.ಹರೀಶ್ ಮಾತನಾಡಿ, ಬಾಬಾಬುಡನಗಿರಿ ದರ್ಗವು ಹಿಂದು, ಮುಸ್ಲಿಮರ ಭಾವೈಕ್ಯತ ಕೇಂದ್ರವಾಗಿದೆ. ನಮ್ಮ ಸರಕಾರ ಅಧಿಕಾರಕ್ಕೆ ಬಂದು 3 ತಿಂಗಳಲ್ಲಿ ಎಚ್.ಡಿ.ಕುಮಾರಸ್ವಾಮಿ ನೇತೃತ್ವದಲ್ಲಿ ಬಾಬಾಬುಡನ್‍ಗಿರಿ ಸಮಸ್ಯೆಯನ್ನು ಬಗೆಹರಿಸಿ ಉತ್ತಮ ಪ್ರವಾಸಿ ಕೇಂದ್ರವನ್ನಾಗಿ ಮಾಡಲಾಗುವುದು ಎಂದರು.

ದತ್ತ ಪೀಠವನ್ನು ಯಾವುದೇ ಕಾರಣಕ್ಕೂ ರಾಜಕೀಯಕ್ಕೆ ಬಳಸಿಕೊಳ್ಳದೆ ಅಭಿವೃದ್ಧಿ ಕೆಲಸಗಳಿಗೆ ಆದ್ಯತೆ ನೀಡಲಾಗುವುದು ಶಾಶ್ವತ ಕುಡಿಯುವ ನೀರಿನ ಸಮಸ್ಯೆ ಮತ್ತು ರೈತರ ಸಮಸ್ಯೆಗೆ ಮೊದಲ ಆಧ್ಯತೆ ನೀಡಿ ಕೆಲಸ ಮಾಡಲಾಗುವುದು ಎಂದರು.

ಈ ಸಂದರ್ಭದಲ್ಲಿ ಜೆಡಿಎಸ್ ಪ್ರಧಾನ ಕಾರ್ಯದರ್ಶಿ ಎಂ.ಡಿ.ರಮೇಶ್, ರಾಜ್ಯ ಅಲ್ಪ ಸಂಖ್ಯಾತರ ಪ್ರದಾನ ಕಾರ್ಯದರ್ಶಿ ಸಿರಾಜ್ ಹುಸೇನ್, ಮುಖಂಡರಾದ ನಿಸಾರ್ ಅಹಮದ್, ಖಾಜಾ ಮಹ್ಮದೀನ್, ಮುಬಾರಖ್, ನಜೀಮ್, ಹರೀಶ್, ನವೀನ್, ಜಯರಾಜ್ ಅರಸ್, ಇಮ್ರಾನ್ ಖಾನ್, ಗೋಪಿ ಇತರರು ಉಪಸ್ಥಿತರಿದ್ದರು. 


Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News