×
Ad

ಸಾಮಾಜಿಕ ಜಾಲತಾಣದಲ್ಲಿ ಮೋಟಮ್ಮ ಪತಿ ಬಗ್ಗೆ ಅಪಪ್ರಚಾರ

Update: 2018-04-25 20:11 IST

ಚಿಕ್ಕಮಗಳೂರು, ಎ.15: ಮೂಡಿಗೆರೆ ವಿಧಾನಸಭಾ ಚುನಾವಣೆಗೆ ಸಂಬಂಧಿಸಿದಂತೆ ಮಂಗಳವಾರ ಬಿಜೆಪಿ ಅಭ್ಯರ್ಥಿ ಎಂ.ಪಿ.ಕುಮಾರಸ್ವಾಮಿ ಅವರು ಮಹಿಳೆಯೊಬ್ಬರಿಗೆ ಅಶ್ಲೀಲ ಸಂದೇಶಗಳನ್ನು ಕಳುಹಿಸಿದ್ದಾರೆನ್ನಲಾದ ವಾಟ್ಸ್ ಆಪ್ ಸಂದೇಶಗಳ ಸ್ಕ್ರೀನ್ ಶಾಟ್‍ಗಳು ವೈರಲ್ ಆದ ಬನ್ನಲ್ಲೆ ಬುಧವಾರ ಕಾಂಗ್ರೆಸ್ ಅಭ್ಯರ್ಥಿ ಮೋಟಮ್ಮ ಅವರ ಪತಿಯ ಬಗ್ಗೆ ಇಂತದ್ದೆ ಆರೋಪ ಮಾಡಿರುವ ಸಂದೇಶಗಳಿರುವ ಮೋಟಮ್ಮ ಅವರದೆನ್ನಲಾದ ಮೊಬೈಲ್ ಸಂಖ್ಯೆಯ ವಾಟ್ಸ್ ಆಪ್ ಸ್ಕ್ರೀನ್ ಶಾಟ್‍ಗಳನ್ನು ಕಿಡಿಗೆಡಿಗಳು ಹರಿಯಬಿಡಲಾರಂಭಿಸಿದ್ದಾರೆ.

ಮಂಗಳವಾರದ ಮೂಡಿಗೆರೆ ವಿಧಾನಸಭೆ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವ ಮಾಜಿ ಶಾಸಕ ಎಂ.ಪಿ.ಕುಮಾರಸ್ವಾಮಿ ಅವರು ಮಹಿಳೆಯೊಬ್ಬಳಿಗೆ ಅಶ್ಲೀಲ ಸಂದೇಶಗಳು ಹಾಗೂ ನೀಲಿ ಚಿತ್ರಗಳನ್ನು ವಾಟ್ಸ್ಆಪ್ ಮಾಡಿದ್ದಾರೆಂದು ಆರೋಪಿಸಿದ ಸ್ಕ್ರೀನ್ ಶಾಟ್‍ಗಳು ಕಿಡಿಗೇಡಿಗಳು ವೈರಲ್ ಮಾಡಿದ್ದರು. ಈ ಕೃತ್ಯದ ವಿರುದ್ಧ ಕುಮಾರಸ್ವಾಮಿ ಎಸ್ಪಿ ಹಾಗೂ ಚುನಾವಣಾಧಿಕಾರಿಗಳಿಗೆ ದೂರು ನೀಡಿ ಆರೋಪಿಗಳ ವಿರುದ್ದ ಕ್ರಮಕ್ಕೆ ಒತ್ತಾಯಿಸಿದ್ದರು.

ಈ ಘಟನೆಯ ಬೆನ್ನಲ್ಲೆ ಬುಧವಾರ ಬೆಳಗ್ಗೆಯಿಂದಲೇ ಮೋಟಮ್ಮ ಅವರ ಪತಿ ಮಹಿಳೆಯೊಬ್ಬರೊಂದಿಗೆ ಇರುವ ಅಶ್ಲೀಲ ವಿಡಿಯೊ ಇದೆ ಎಂದು ಹೇಳಿ ಮೋಟಮ್ಮ ಅವರ ಮೊಬೈಲ್ ನಂಬರ್ ಗೆ ವಾಟ್ಸ್ಆಪ್ ಮಾಡಿರುವ ಹಾಗೂ ಮೋಟಮ್ಮ ಅವರು ಸಂದೇಶಗಳಿಗೆ ಪ್ರತಿಕ್ರಿಯಿಸಿದ್ದಾರೆ ಎನ್ನಲಾದ ಸಂದೇಶಗಳಿರುವ ಸ್ಕ್ರೀನ್ ಶಾಟ್‍ಗಳು ಎಲ್ಲೆಡೆ ಹರಿದಾಡುತ್ತಿವೆ.

ಈ ಕೃತ್ಯಗಳನ್ನು ಕಿಡಿಗೇಡಿಗಳು ಮಾಡುತ್ತಿದ್ದಾರೆಂಬ ಮಾತುಗಳು ಕೇಳಿ ಬರುತ್ತಿದ್ದು, ಚುನಾವಣಾ ಸಂದರ್ಭದಲ್ಲಿ ಅಭ್ಯರ್ಥಿಗಳ ಮಾನಸಿಕ ಮನೋಬಲ ಕುಗ್ಗಿಸುವ ನಿಟ್ಟಿನ ಲ್ಲಿ ವೈಯಕ್ತಿಯ ವಿಚಾರಗಳ ಬಗ್ಗೆ ತೇಜೋವಧೆಗಿಳಿಯುವಷ್ಟರ ಮಟ್ಟಿಗೆ ಕಿಡಿಗೇಡಿಗಳು ಕೃತ್ಯ ಎಸಗುತ್ತಿರುವುದು ಸಹಿಸಲು ಸಾಧ್ಯವಿಲ್ಲ. ಪೊಲೀಸರು ಇಂತಹ ಕಿಡಿಗೇಡಿಗಳನ್ನು ಪತ್ತೆ ಹಚ್ಚಿ ಕಠಿಣ ಶಿಕ್ಷೆಗೆ ಗುರಿಪಡಿಸಬೇಕೆಂದು ನಾಗರಿಕರು ಒತ್ತಾಯಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News