10 ದಿನ, 60 ಕ್ಷೇತ್ರಗಳಲ್ಲಿ ಸಿದ್ದರಾಮಯ್ಯರಿಂದ ಕಾಂಗ್ರೆಸ್ ಅಭ್ಯರ್ಥಿಗಳ ಪರ ಚುನಾವಣಾ ಪ್ರಚಾರ
Update: 2018-04-27 20:35 IST
ಬೆಂಗಳೂರು, ಎ. 27: ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಎ.28 ರಿಂದ ಹತ್ತು ದಿನಗಳ ಕಾಲ ರಾಜ್ಯ ಪ್ರವಾಸ ಕೈಗೊಳ್ಳಲಿದ್ದು, ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳ ಪ್ರಚಾರ ನಡೆಸಲಿದ್ದಾರೆ.
ಪ್ರತಿನಿತ್ಯ ಆರು ಕ್ಷೇತ್ರಗಳಂತೆ ಹತ್ತು ದಿನಗಳಲ್ಲಿ ಅರವತ್ತಕ್ಕೂ ಹೆಚ್ಚು ವಿಧಾನಸಭೆ ಕ್ಷೇತ್ರಗಳಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಭೇಟಿ ನೀಡಿ ಕಾಂಗ್ರೆಸ್ ಅಭ್ಯರ್ಥಿಗಳ ಪರ ಪ್ರಚಾರ ನಡೆಸಲಿದ್ದಾರೆ. ನಾಳೆ ಬೆಳಗ್ಗೆ 11.30ಕ್ಕೆ ಬೆಳಗಾವಿ ಜಿಲ್ಲೆಯ ನಿಪ್ಪಾಣಿ ಕ್ಷೇತ್ರದಿಂದ ಪ್ರಚಾರ ಕಾರ್ಯ ಆರಂಭಿಸಲಿದ್ದಾರೆ.
ಎ.28 ಕ್ಕೆ ಬೆಳಗಾವಿ, ಎ.29 ಕ್ಕೆ-ಬಾಗಲಕೋಟ, ವಿಜಯಪುರ, ಎ.30-ಕಲಬುರಗಿ, ಬೀದರ್, ರಾಯಚೂರು, ಮೇ 1ಕ್ಕೆ-ಗದಗ, ಧಾರವಾಡ, ಮೇ 2ಕ್ಕೆ-ಹಾವೇರಿ, ಬಳ್ಳಾರಿ, ಮೇ 3ಕ್ಕೆ-ಚಿತ್ರದುರ್ಗ, ದಾವಣಗೆರೆ, ಮೇ 4ಕ್ಕೆ-ಶಿವಮೊಗ್ಗ, ಮೇ 5- ತುಮಕೂರು, ಮೇ 6ಕ್ಕೆ ಚಾಮರಾಜನಗರ ಜಿಲ್ಲೆಯಲ್ಲಿ ಪ್ರವಾಸ ಕೈಗೊಳ್ಳಲಿದ್ದಾರೆ.