×
Ad

ಹನೂರು: ಜೆಡಿಎಸ್ ಅಭ್ಯರ್ಥಿ ಎಂ.ಆರ್ ಮಂಜುನಾಥ್ ಮತಯಾಚನೆ

Update: 2018-04-27 21:46 IST

ಹನೂರು,ಎ.27: ಕ್ಷೇತ್ರವನ್ನು ಸಮೃದ್ದಿಯ ಅಬಿವೃದ್ದಿಯತ್ತ ಕೊಂಡೊಯ್ಯಲು ಹೆಚ್.ಡಿ ಕುಮಾರಸ್ವಾಮಿಯವರ ನಾಯಕತ್ವದ ಜೆ.ಡಿ.ಎಸ್ ಸರ್ಕಾರವನ್ನು ಬೆಂಬಲಿಸಿ ಎಂದು ಜೆಡಿಎಸ್ ಅಭ್ಯರ್ಥಿ ಎಂ .ಆರ್ ಮಂಜುನಾಥ್ ತಿಳಿಸಿದರು 

ಹನೂರು ಕ್ಷೇತ್ರ ವ್ಯಾಪ್ತಿಯ ವಡಕೆಹಳ್ಳಿ, ಬಿದರಹಳ್ಳಿ, ವಡ್ಡರದೊಡ್ಡಿ, ಹಳೇ ಮಾರ್ಟಳ್ಳಿ, ಮಾರ್ಟಳ್ಳಿ ಗ್ರಾಮಗಳಲ್ಲಿ ಕಾರ್ಯಕರ್ತರ ಜೊತೆ ಗೂಡಿ ಬಿರುಸಿನ ಮತಯಾಚನೆ ಮಾಡಿ ನಂತರ ಅವರು ಮಾತನಾಡಿದರು. ಕಳೆದ 10 ವರ್ಷದ ಅವಧಿಯಲ್ಲಿ ಸ್ಥಳೀಯ ಶಾಸಕರ ನಿರ್ಲಕ್ಷ್ಯದಿಂದ ಕ್ಷೇತ್ರ ಅಭಿವೃದ್ಧಿ ಕಂಡಿಲ್ಲ. ಜತೆಗೆ ಇಲ್ಲಿನ ಯುವಕರಿಗೆ ಮತ್ತು ಗ್ರಾಮಸ್ಥರಿಗೆ ಸ್ಥಳೀಯ ಮಟ್ಟದಲ್ಲಿ ಉದ್ಯೋಗ ಕಲ್ಪಿಸುವಲ್ಲಿ ವಿಫಲರಾಗಿದ್ದಾರೆ. ಇದರಿಂದ ಕ್ಷೇತ್ರ ವ್ಯಾಪ್ತಿಯ ಕಾಡಂಚಿನ ಗ್ರಾಮದ ಜನರು ಉದ್ಯೋಗವನ್ನರಸಿ ಬೇರೆಡೆ ಹೋಗುತ್ತಿದ್ದು, ಈ ಭಾಗದ ಜನರಿಗೆ ಉದ್ಯೋಗ ಸಮಸ್ಯೆ ತುಂಬಾ ಇದೆ. ಕಾಲಕಾಲಕ್ಕೆ ಮಳೆಯಾಗದ ಕಾರಣ ಜಮೀನಿದ್ದರೂ, ವ್ಯವಸಾಯ ಮಾಡಲು ಸಾಧ್ಯವಾಗುತ್ತಿಲ್ಲ, ಆಗಾಗಿ ಇಲ್ಲಿನ ಜನರು ಉದ್ಯೋಗವನ್ನು ಹರಸಿ ಕೇರಳ, ತಮಿಳುನಾಡು ಹಾಗೂ ಕೊಡಗಿನ ಕಾಫಿ ತೋಟಕ್ಕೆ ವಲಸೆ ಹೋಗುತ್ತಿದ್ದಾರೆ. ಆದುದರಿಂದ ಈ ಬಾರಿ ನನ್ನ ಗೆದ್ದರೆ ಕ್ಷೇತ್ರದ ಜನರಿಗೆ ಉದ್ಯೋಗ ಕಲ್ಪಿಸುವ ನಿಟ್ಟನಲ್ಲಿ ಕ್ಷೇತ್ರದಲ್ಲಿ ಒಂದು ಕೈಗಾರಿಕಾ ಕೇಂದ್ರವನ್ನು ಸ್ಥಾಪಸಲಾಗುವುದು ಎಂದು ಭರವಸೆ ನೀಡಿದರು 

ನಂತರ ಮಾಜಿ ತಾಲೂಕು ಪಂಚಾಯತ್ ಸದಸ್ಯ ರಾಜು ಮಾತನಾಡಿ, ಸ್ವಾವಲಂಬನೆಯಿಂದ ಜೀವನ ಸಾಗಿಸುತ್ತಿರುವ ಭೋವಿ ಜನಾಂಗವನ್ನು ಹನೂರು ಕ್ಷೇತ್ರದಲ್ಲಿ 2 ಕುಟುಂಬಗಳು ನಿರ್ಲಕ್ಷ್ಯ ಮಾಡಿದೆ. ಕಳೆದ ಹಲವಾರು ವರ್ಷಗಳಿಂದ ನಾಗಪ್ಪ , ರಾಜೂಗೌಡರ 2 ಕುಟುಂಬಗಳು ಭೋವಿ ಜನಾಂಗವನ್ನು ಕಡೆಗಣಿಸಿದ್ದು, ಕ್ಷೇತ್ರದಲ್ಲಿ ಭೋವಿ ಜನಾಂಗದವರು ಸುಮಾರು 15000 ಮತದಾರರಿದ್ದು, ಜನಾಂಗಕ್ಕೆ ಯಾವುದೇ ಸವಲತ್ತುಗಳನ್ನು ನೀಡಿಲ್ಲ. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಸದಾಶಿವ ಆಯೋಗವನ್ನು ಮುಂದಿಟ್ಟುಕೊಂಡು ಲಂಬಾಣಿ, ಕೊರಮ ಜನಾಂಗವನ್ನು ಮೀಸಲಾತಿಯಿಂದ ಹೊರಹಾಕಲು ಹುನ್ನಾರ ನಡೆಸಿದೆ. ಇದನ್ನೆಲ್ಲಾ ಮನಗಂಡು ಈ ಬಾರಿ ನಮ್ಮ ಬೋವಿ ಜನಾಂಗ ಒಟ್ಟಾಗಿ ಜೆ.ಡಿ.ಎಸ್  ಬೆಂಬಲಿಸಿದ್ದು, ಕುಮಾರಸ್ವಾಮಿ ಮುಖ್ಯಮಂತ್ರಿಯಾಗಲಿದ್ದಾರೆ. ಆದುದರಿಂದ ಮಂಜುನಾಥ್ ಅವರಿಗೆ ಮತ ನೀಡಿ ಗೆಲುವಿಗೆ ಶ್ರಮಿಸುತ್ತೇವೆ ಎಂದರು.

ಮತಯಾಚನೆ ಸಂದರ್ಭದಲ್ಲಿ ಮಾರ್ಟಳ್ಳಿ ಗ್ರಾಪಂ ಸದಸ್ಯರಾದ ಕಾಶಿಮ್‍ಭಾಯ್, ಹೂಗ್ಯಂನ ಗ್ರಾಪಂ ಸದಸ್ಯರಾದ ವೆಂಕಟೇಶ್, ಮಲ್ಲೇಶ್ ಗ್ರಾಪಂ ಸದಸ್ಯ, ಮಹದೇವ್, ಗಿರೀಶ್, ನಾಗಮಲೆ, ವಜ್ಜೂರು  ದೂಡ್ಡರಾಜು, ರಾಜಪ್ಪ, ಮುನಿಯಪ್ಪ (ಕೂಪ್ಪ) ಮಾದೇವ್ , ಕೋಳಿನಾಗ , ಸೇರಿದಂತೆ ನೂರಾರು ಕಾರ್ಯಕರ್ತರು ಬಿಜೆಪಿ ಮತ್ತು ಕಾಂಗ್ರೆಸ್ ತೊರೆದ ಆರ್.ಮಂಜುನಾಥ್ ನೇತೃತ್ವದಲ್ಲಿ ಜೆಡಿಎಸ್ ಸೇರ್ಪಡೆಯಾದರು.

ಇದೇ ಸಂದರ್ಭದಲ್ಲಿ ಜಿ.ಪಂ ಮಾಜಿ ಸದಸ್ಯ ನಾಗೇಂದ್ರಬಾಬು, ಸಿಂಗನಲ್ಲೂರು ರಾಜಣ್ಣ, ಹಿರಿಯ ಮುಖಂಡ ಪೋನ್ನಾಚ್ಚಿ ಮಹದೇವಸ್ವಾಮಿ ,ವಕೀಲ ರುದ್ರಾರದ್ಯ, ಕಾಮಗೆರೆ ರವಿ, ಶಿವಮೂರ್ತಿ, ಹೂಸರು ಬಸವರಾಜು ಹನೂರು ಮಂಜೇಶ್, ಅಮೀನ್, ಪ್ರಸನ್ನ, ಶಿವರಾಮೇಗೌಡ, ವೆಂಕಟೇಶ, ಬೋವಿ ಸಂಘದ ಅಧ್ಯಕ್ಷರಾದ ರವಿಚಂದ್ರ, ಮಾಜಿ ತಾ.ಪಂ ಸದಸ್ಯರಾದ ಮಹದೇವು, ಕೃಷ್ಣ, ಇನ್ನಿತರರು ಇದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News