×
Ad

ಹನೂರು: ಮತದಾನ ಜಾಗೃತಿ ಕಾರ್ಯಕ್ರಮ

Update: 2018-04-27 21:51 IST

ಹನೂರು,ಎ.27: ಹನೂರು ಕರವೇ ಸ್ವಾಭಿಮಾನಿ ಬಣದ ವತಿಯಿಂದ ಪಿ.ಜಿ.ಪಾಳ್ಯ ಗ್ರಾಮದಲ್ಲಿ ಮತದಾನ ಜಾಗೃತಿ ಕಾರ್ಯಕ್ರಮ ಏರ್ಪಡಿಸಲಾಗಿತ್ತು.

ಈ ಕಾರ್ಯಕ್ರವನ್ನುದ್ದೇಶಿಸಿ ಮಾತನಾಡಿದ ಅಧ್ಯಕ್ಷರಾದ ವಿನೋದ್‍ಕುಮಾರ್, ಗ್ರಾಮದಲ್ಲಿ ಪ್ರತಿಯೊಬ್ಬರು ಯಾವುದೇ, ಆಸೆ, ಆಮಿಷಗಳಿಗೆ ಒಳಗಾಗದೇ  ತಮ್ಮ ಮತವನ್ನು ಧೈರ್ಯದಿಂದ ಚಲಾಯಿಸಿ. ಕ್ಷೇತ್ರದ ಸರ್ವಾಂಗೀಣ ಅಭಿವೃದ್ದಿಗೆ ಹಾಗೂ ಉತ್ತಮ ಸಮಾಜ ನಿರ್ಮಾಣ ಮಾಡುವ ವ್ಯಕ್ತಿಯನ್ನು ಆರಿಸಲು ಮತ್ತು ರಾಜ್ಯ ದೇಶ, ಸುಭದ್ರತೆಗಾಗಿ ಉತ್ತಮ ಸರಕಾರ ರಚನೆಗೆ ಜನರ ಮತ ಸಹಕಾರಿಯಾಗಲಿದೆ ಎಂದು ತಿಳಿಸಿದರು.

ಈ ವೇಳೆ ಕಾರ್ಯದರ್ಶಿ ಗಿರೀಶ್ ಪಿ.ಜಿ,ಪಾಳ್ಯ ಘಟಕದ ಉಸ್ತುವಾರಿ ಸಿದ್ದಲಿಂಗು, ಪದಾಧಿಕಾರಿಗಳಾದ ಆಟೋ ಪ್ರಭು, ಮಹದೇವಸ್ವಾಮಿ, ಪ್ರಕಾಶ್ ಟೈಲರ್ ಮಹೇಶ್ ಇನ್ನಿತರರು ಹಾಜರಿದ್ದರು 

 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News