×
Ad

ಮೈಸೂರು: ಅಪಘಾತದ ಗಾಯಾಳು ಮಹಿಳೆಯನ್ನು ಆಸ್ಪತ್ರೆಗೆ ಸೇರಿಸಿದ ಶಾಸಕ ಎಂ.ಕೆ ಸೋಮಶೇಖರ್

Update: 2018-04-27 22:19 IST

ಮೈಸೂರು,ಎ.27: ಅಪಘಾತ ಸಂಭವಿಸಿ ನಡು ರಸ್ತೆಯಲ್ಲೇ ಬಿದ್ದಿದ್ದ ಮಹಿಳೆಯನ್ನು ಶಾಸಕರೊಬ್ಬರು ತಮ್ಮ ವಾಹನದಲ್ಲೇ ಆಸ್ಪತ್ರೆ ಸೇರಿಸಿ ಮಾನವೀಯತೆ ಮೆರೆದಿದ್ದಾರೆ.

ಮೈಸೂರು ನಗರದ ಕೃಷ್ಣರಾಜ ಕ್ಷೇತ್ರದ ಎಂ.ಕೆ. ಸೋಮಶೇಖರ್ ಮಾನವೀಯತೆ ಮೆರೆದ ಶಾಸಕ. ಇವರು ಚುನಾವಣಾ ಪ್ರಚಾರ ಮುಗಿಸಿಕೊಂಡು ಹುಣಸೂರು ರಸ್ತೆಯ ಯಶಸ್ವಿನಿ ಸಭಾಂಗಣದಲ್ಲಿ ಸ್ನೇಹಿತರೊಬ್ಬರ ಆರತಕ್ಷತೆಯಲ್ಲಿ ಭಾಗವಹಿಸಿ ಹಿಂತಿರುಗುತ್ತಿದ್ದಾಗ ಅಪಘಾತ ಸಂಭವಿಸಿ ಮಹಿಳೆ ರಸ್ತೆಯಲ್ಲೇ ನರಳುತಿದ್ದರು.

ಇದನ್ನು ಕಂಡ ಶಾಸಕ ಸೋಮಶೇಖರ್, ತಕ್ಷಣ ಕಾರು ನಿಲ್ಲಿಸಿ ತಮ್ಮ ಕಾರಿನಲ್ಲೇ ನಗರದ ಖಾಸಗಿ ಆಸ್ಪತ್ರೆಗೆ ಸೇರಿಸಿದ್ದಾರೆ. ಅಲ್ಲದೆ ಕುಟುಂಬದವರಿಗೆ ಧೈರ್ಯವನ್ನು ತುಂಬಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News