×
Ad

ಚಿಕ್ಕಮಗಳೂರು: ಜಿಲ್ಲೆಯ ಐದು ಕ್ಷೇತ್ರಗಳಲ್ಲಿ ಒಟ್ಟು 64 ಅಭ್ಯರ್ಥಿಗಳು ಕಣದಲ್ಲಿ

Update: 2018-04-27 22:47 IST

ಚಿಕ್ಕಮಗಳೂರು, ಎ.27: ನಾಮಪತ್ರ ಹಿಂಪಡೆಯಲು ಶುಕ್ರವಾರ ಕೊನೆಯ ದಿನವಾಗಿದ್ದು, ಚಿಕ್ಕಮಗಳೂರು ಜಿಲ್ಲೆಯ ಐದು ಕ್ಷೇತ್ರಗಳಲ್ಲಿ ಒಟ್ಟು 64 ಅಭ್ಯರ್ಥಿಗಳು ಕಣದಲ್ಲಿದ್ದಾರೆ. 

ಚಿಕ್ಕಮಗಳೂರು ವಿಧಾನಸಭಾ ಕ್ಷೇತ್ರದಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದ ಗೋಪಾಲಕೃಷ್ಣ ನಾಮಪತ್ರ ವಾಪಸ್ ಪಡೆದುಕೊಂಡಿದ್ದು, 18 ಜನ ಕಣದಲ್ಲಿದ್ದಾರೆ. 

ತರೀಕೆರೆ ಕ್ಷೇತ್ರದಲ್ಲಿ 5 ಜನ ನಾಮಪತ್ರಗಳನ್ನು ವಾಪಸ್ ಪಡೆದುಕೊಂಡಿದ್ದು ಕಣದಲ್ಲಿ 12 ಜನ ಉಳಿದುಕೊಂಡಿದ್ದಾರೆ. ಕಡೂರು ಕ್ಷೇತ್ರದಲ್ಲಿ 3 ಜನ ನಾಪತ್ರ ಹಿಂಪಡೆದಿದ್ದು, 12 ಅಭ್ಯರ್ಥಿಗಳು ಕಣದಲ್ಲಿ ಉಳಿದಿದ್ದಾರೆ.

ಮೂಡಿಗೆರೆ ಹಾಗೂ ಶೃಂಗೇರಿ ವಿಧಾನಸಭಾ ಕ್ಷೇತ್ರಗಳಲ್ಲಿ ಯಾವ ಅಭ್ಯರ್ಥಿಗಳು ನಾಮಪತ್ರಗಳನ್ನು ಹಿಂದಕ್ಕೆ ಪಡೆದಿಲ್ಲವಾಗಿದ್ದು, ಮೂಡಿಗೆರೆಯಲ್ಲಿ 10 ಹಾಗೂ ಶೃಂಗೇರಿಯಲ್ಲಿ 8 ಜನ ಕಣದಲ್ಲಿ ಉಳಿದುಕೊಂಡಿದ್ದಾರೆ. ಇನ್ನು ಕಡೂರು ಕ್ಷೇತ್ರದಲ್ಲಿ ಕಾಂಗ್ರೆಸ್‍ನಿಂದ ಬಂಡಾಯವೆದ್ದಿದ್ದ ಕಡೂರು ಸಿ.ನಂಜಪ್ಪ ಹಾಗೂ ಧನಂಜಯ ಅವರುಗಳ ಮನವೊಲಿಸಿ ನಾಮಪತ್ರಗಳನ್ನು ವಾಪಸ್ ಪಡೆದುಕೊಳ್ಳುವಲ್ಲಿ ಕಾಂಗ್ರೆಸ್ ಮುಖಂಡರು ಯಶಸ್ವಿಯಾಗಿದ್ದಾರೆ.

ಉಳಿದಂತೆ ತರೀಕೆರೆ ವಿಧಾನಸಭಾ ಕ್ಷೇತ್ರದ ಚುನಾವಣೆಗಾಗಿ ನಾಮಪತ್ರ ಸಲ್ಲಿಸಿದ್ದ 17 ಮಂದಿ ಅಭ್ಯಾರ್ಥಿಗಳಲ್ಲಿ  5 ಮಂದಿ ನಾಮಪತ್ರವನ್ನು ವಾಪಸ್ಸು ಪಡೆದಿದ್ದು, 12ಮಂದಿ ಕಣದಲ್ಲಿ ಉಳಿದುಕೊಂಡಿದ್ದಾರೆ.

ಪಕ್ಷೇತರರಾದ ಡಿ.ಎಂ.ಪರಮೇಶ್ವರಪ್ಪ, ಎ.ಬಿ.ರಾಜಕುಮಾರ, ಎಸ್.ಜಿ.ವಾಣಿ , ಬಿ.ಆರ್. ಪ್ರಭುಲಿಂಗ ಹಾಗೂ ಬಿ.ಪಿ.ವಿಕಾಸ್ ನಾಮಪತ್ರ ವಾಪಸ್ಸು 

ಕಣದಲ್ಲಿ ಉಳಿದವರು: ಎಸ್.ಎಂ.ನಾಗರಾಜ್ ( ಕಾಂಗ್ರೆಸ್) ,ಡಿ.ಎಸ್.ಸುರೇಶ್ (ಬಿ.ಜೆ.ಪಿ) ಟಿ.ಎಚ್.ಶಿವಶಂಕರಪ್ಪ (ಜೆಡಿಎಸ್) ಡಾ.ಬಿ.ಎಸ್. ಮಂಜುನಾಥ್ ( ಎಂ.ಇ.ಪಿ) ಎಲ್.ಬಿ.ಅಕ್ಷಯ್ (ಕರ್ನಾಟಕ ಪ್ರಜ್ಞಾವಂತ ಜನತಾ ಪಕ್ಷ) ಪಕ್ಷೇತರರಾಗಿ ಜಿ.ಎಚ್.ಶ್ರೀನಿವಾಸ್ , ಎಚ್.ಎಂ.ಗೋಪಿ, ಡಿ.ಸಿ.ಸುರೇಶ್, ಕಾಂತರಾಜು, ಖಲೀಲ್, ಸಾಧಿಕ್, ಶ್ರೀನಾಥ್.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News