×
Ad

ಮಂಡ್ಯ: 84 ಅಭ್ಯರ್ಥಿಗಳು ಅಂತಿಮ ಕಣದಲ್ಲಿ

Update: 2018-04-27 23:33 IST

ಮಂಡ್ಯ, ಎ.27: ಜಿಲ್ಲೆಯ ಏಳು ವಿಧಾನಸಭಾ ಕ್ಷೇತ್ರಗಳ ಚುನಾವಣೆಗೆ ಸಲ್ಲಿಕೆಯಾಗಿರುವ ನಾಮಪತ್ರ ಹಿಂಪಡೆಯಲು ಕಡೆಯ ದಿನವಾದ ಶುಕ್ರವಾರ 29 ಮಂದಿ ಅಭ್ಯರ್ಥಿಗಳು ಉಮೇದುವಾರಿಕೆಯನ್ನು ಹಿಂತೆಗೆದುಕೊಂಡಿದ್ದು, ಅಂತಿಮವಾಗಿ ಒಟ್ಟು 84 ಅಭ್ಯರ್ಥಿಗಳು ಚುನಾವಣಾ ಕಣದಲ್ಲಿ ಉಳಿದಿದ್ದಾರೆ.

ಮಂಡ್ಯ ವಿಧಾನಸಭಾ ಕ್ಷೇತ್ರದಿಂದ ಕಾಂಗ್ರೆಸ್ ಬಂಡಾಯ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದ ಮಾಜಿ ಶಾಸಕ ಎಚ್.ಬಿ.ರಾಮು, ಜೆಡಿಎಸ್‍ನ ಸಿದ್ದರಾಮೇಗೌಡ, ಕೆ.ಆರ್.ಪೇಟೆ ಕ್ಷೇತ್ರದ ಜೆಡಿಎಸ್ ಬಂಡಾಯ ಅಭ್ಯರ್ಥಿಗಳಾದ ಮಾಜಿ ಶಾಸಕ ಬಿ.ಪ್ರಕಾಶ್, ಜಿಪಂ ಸದಸ್ಯ ಬಿ.ಎಲ್.ದೇವರಾಜು, ಕಾಂಗ್ರೆಸ್ ಕುಮಾರ್ ನಾಮಪತ್ರ ಹಿಂಪಡೆದ ಪ್ರಮುಖರು.

ಮದ್ದೂರು ವಿಧಾನಸಭಾ ಕ್ಷೇತ್ರದಲ್ಲಿ  13, ಮಳವಳ್ಳಿಯಲ್ಲಿ 13, ಮೇಲುಕೋಟೆಯಲ್ಲಿ 13, ಶ್ರೀರಂಗಪಟ್ಟಣದಲ್ಲಿ 11, ನಾಗಮಂಗಲ ಕ್ಷೇತ್ರದಲ್ಲಿ 13, ಮಂಡ್ಯದಲ್ಲಿ 13 ಹಾಗೂ ಕೆ.ಆರ್.ಪೇಟೆ ವಿಧಾನಸಭಾ ಕ್ಷೇತ್ರದಲ್ಲಿ 11 ಅಭ್ಯರ್ಥಿಗಳು ಕಣದಲ್ಲಿ ಉಳಿದಿದ್ದಾರೆ.

ಪ್ರಮುಖ ಅಭ್ಯರ್ಥಿಗಳ ವಿವರ:

ಮದ್ದೂರು ವಿಧಾನಸಭಾ ಕ್ಷೇತ್ರದಲ್ಲಿ ಜನತಾದಳ (ಜಾತ್ಯತೀತ)-ಡಿ.ಸಿ.ತಮ್ಮಣ್ಣ, ಭಾರತೀಯ ರಾಷ್ಟ್ರೀಯ ಕಾಂಗ್ರೇಸ್-ಜಿ.ಎಂ.ಮಧು, ಭಾರತೀಯ ಜನತಾ ಪಕ್ಷ-ಎಂ.ಸತೀಶ್, ಸ್ವರಾಜ್ ಇಂಡಿಯಾ ಪಕ್ಷ-ಲಿಂಗೇಗೌಡ ಎಸ್.ಎಚ್.

ಮಳವಳ್ಳಿ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್-ಎಂ.ಪಿ.ನರೇಂದ್ರಸ್ವಾಮಿ,  ಜನತಾದಳ (ಜಾತ್ಯತೀತ)-ಡಾ.ಕೆ.ಅನ್ನದಾನಿ, ಬಿಜೆಪಿ-ಬಿ.ಸೋಮಶೇಖರ್.
ಮೇಲುಕೋಟೆ ವಿಧಾನಸಭಾ ಕ್ಷೇತ್ರದಲ್ಲಿ ಜನತಾದಳ (ಜಾತ್ಯತೀತ)-ಸಿ.ಎಸ್.ಪುಟ್ಟರಾಜು, ಬಿಜೆಪಿ-ಸುಂಡಹಳ್ಳಿ ಸೋಮಶೇಖರ, ಸ್ವರಾಜ್ ಇಂಡಿಯಾ ಪಕ್ಷ-ದರ್ಶನ್ ಪುಟ್ಟಣ್ಣಯ್ಯ, ಪಕ್ಷೇತರ-ಕೆ.ಎಸ್.ದರ್ಶನ್.

ಶ್ರೀರಂಗಪಟ್ಟಣ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ-ಕೆ.ಎಸ್.ನಂಜುಂಡೇಗೌಡ, ಕಾಂಗ್ರೆಸ್- ಎ.ಬಿ.ರಮೇಶ್ ಬಂಡಿಸಿದ್ದೇಗೌಡ, ಜನತಾದಳ (ಜಾತ್ಯತೀತ)-ಎ.ಎಸ್.ರವೀಂದ್ರ.

ನಾಗಮಂಗಲ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್-ಎನ್.ಚಲುವರಾಯಸ್ವಾಮಿ, ಬಿಜೆಪಿ-ಡಾ.ಪಾರ್ಥಸಾರಥಿ.ವಿ, ಜನತಾದಳ (ಜಾತ್ಯಾತೀತ)-ಸುರೇಶ್‍ಗೌಡ, ಕರ್ನಾಟಕ ಜನತಾ ಪಕ್ಷ-ಬಿ.ಎಸ್.ಗೌಡ.

ಮಂಡ್ಯ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೇಸ್-ಪಿ.ರವಿಕುಮಾರ್, ಬಿಜೆಪಿ-ಶಿವಣ್ಣ.ಎನ್, ಜನತಾದಳ (ಜಾತ್ಯಾತೀತ)-ಎಂ.ಶ್ರೀನಿವಾಸ್,  ಪಕ್ಷೇತರ-ಡಾ.ಎಸ್.ಸಿ.ಶಂಕರೇಗೌಡ, ಪಕ್ಷೇತರ-ಎಂ.ಬಿ.ನಾಗಣ್ಣ. 

ಕೆ.ಆರ್.ಪೇಟೆ ವಿಧಾನಸಭಾ ಕ್ಷೇತ್ರದಲ್ಲಿ ಜನತಾದಳ (ಜಾತ್ಯತೀತ)-ನಾರಾಯಣಗೌಡ, ಕಾಂಗ್ರೇಸ್-ಕೆ.ಬಿ.ಚಂದ್ರಶೇಖರ್, ಬಿಜೆಪಿ-ಬಿ.ಸಿ.ಮಂಜು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News