ಚೀನಾದ ಅಧ್ಯಕ್ಷ ಕ್ಸೀ ಜಿನ್ ಪಿಂಗ್ ಮಾತುಕತೆ ಫಲಪ್ರದ: ಪ್ರಧಾನಿ ಮೋದಿ

Update: 2018-04-28 05:46 GMT

ವುಹಾನ್, ಎ.28: ಚೀನಾದ ಅಧ್ಯಕ್ಷ ಕ್ಸೀ ಜಿನ್ಪಿಂಗ್ ಅವರೊಂದಿಗೆ ನಡೆಸಿದ ಮಾತುಕತೆ ‘ವ್ಯಾಪಕ ಮತ್ತು ಫಲಪ್ರದವಾಗಿದೆ ಎಂದು ಬಣ್ಣಿಸಿರುವ ಪ್ರಧಾನ ಮಂತ್ರಿ ನರೇಂದ್ರ ಮೋದಿ  2019ರಲ್ಲಿ ಇನ್ನೊಂದು ಸುತ್ತಿನ ಮಾತುಕತೆಗೆ ಭಾರತಕ್ಕೆ ಭೇಟಿ  ನೀಡುವಂತೆ ಚೀನಾದ ಅಧ್ಯಕ್ಷ ಕ್ಸೀ ಜಿನ್ಪಿಂಗ್  ಅವರಿಗೆ ಆಹ್ವಾನ ನೀಡಿದ್ದಾರೆ.

ಮಾತುಕತೆ ಮುಗಿದ ಬೆನ್ನಲ್ಲೇ ಟ್ವೇಟ್ ಮಾಡಿರುವ ಪ್ರಧಾನಿ ಮೋದಿ ಅವರು ಭಾರತ ಮತ್ತು ಚೀನಾ  ಸಂಬಂಧವನ್ನು ಇನಷ್ಟು ಬಲಪಡಿಸುವ ನಿಟ್ಟಿನಲ್ಲಿ ಹಾಗೂ  ಇತರ ಜಾಗತಿಕ ಸಮಸ್ಯೆಗಳ ಬಗ್ಗೆ ಚರ್ಚಿಸಿದ್ದೇವೆ. ಎಂದು ಹೇಳಿದ್ದಾರೆ"

ಪ್ರಧಾನಿ ಮೋದಿ ಶುಕ್ರವಾರ ಮಧ್ಯ ಚೀನಾದ ನಗರಕ್ಕೆ ಆಗಮಿಸಿದ್ದರು.

ಹ್ಯೂಬೀ ಪ್ರಾಂತೀಯ ಮ್ಯೂಸಿಯಂ ಬಳಿ ಏರ್ಪಡಿಸಲಾದ  ಸಮಾರಂಭದಲ್ಲಿ ಮೋದಿ ಅವರನ್ನು ಸ್ವಾಗತಿಸಲಾಗಿತ್ತು.  ಬಳಿಕ  ಇವರ ಮಾತುಕತೆ ಆರಂಭವಾಗಿತ್ತು.  ಉಭಯ ದೇಶಗಳ ಪರ  ಮಾತುಕತೆಗೆ ಉತ್ತಮ ವೇದಿಕೆ ಸಿಕ್ಕಿದೆ ಎಂದು ಮೋದಿ ಈ ಸಂದರ್ಭದಲ್ಲಿ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News