ಲಾದನ್ ಪತ್ತೆಗೆ ನೆರವು ನೀಡಿದ್ದ ವೈದ್ಯ ಅಜ್ಞಾತ ಸ್ಥಳಕ್ಕೆ

Update: 2018-04-28 17:46 GMT

ಪೇಶಾವರ (ಪಾಕಿಸ್ತಾನ), ಎ. 28: ಅಲ್ ಖಾಯ್ದ ನಾಯಕ ಉಸಾಮ ಬಿನ್ ಲಾದನ್‌ನನ್ನು ಪತ್ತೆಹಚ್ಚಿ ಕೊಲ್ಲಲು ಅಮೆರಿಕದ ಸೇನೆಗೆ ಸಹಾಯ ಮಾಡಿದ್ದ ಪಾಕಿಸ್ತಾನದ ವೈದ್ಯರನ್ನು ದೇಶದ ನೈರುತ್ಯ ಭಾಗದ ಬಂದೀಖಾನೆಯೊಂದರಿಂದ ಅಜ್ಞಾತ ಸುರಕ್ಷಿತ ಸ್ಥಳವೊಂದಕ್ಕೆ ಸ್ಥಳಾಂತರಿಸಲಾಗಿದೆ.

 ಶಕೀಲ್ ಅಫ್ರಿದಿ ಪೇಶಾವರ ನಗರದ ಜೈಲಿನಲ್ಲಿ ಸುಮಾರು 7 ವರ್ಷಗಳಿಂದ ಇದ್ದಾರೆ. ಅಲ್-ಖಾಯ್ದಾ ಮುಖ್ಯಸ್ಥನನ್ನು ಪತ್ತೆಹಚ್ಚುವಲ್ಲಿ ಅಮೆರಿಕದ ಸೈನಿಕರಿಗೆ ನೆರವು ನೀಡಲು ಅವರು ನಕಲಿ ಲಸಿಕೆ ಕಾರ್ಯಕ್ರಮವೊಂದನ್ನು ರೂಪಿಸಿದ್ದರು ಎನ್ನಲಾಗಿದೆ.

ಅಫ್ರಿದಿಯನ್ನು ಗುಪ್ತಚರ ಅಧಿಕಾರಿಗಳು ಗುರುವಾರ ರಾತ್ರಿ ಸುರಕ್ಷಿತ ಸ್ಥಳವೊಂದಕ್ಕೆ ಕರೆದೊಯ್ದಿದ್ದಾರೆ ಎಂದು ಖೈಬರ್ ಪಖ್ತೂನ್‌ಖ್ವ ಪ್ರಾಂತದ ಉನ್ನತ ಜೈಲು ಅಧಿಕಾರಿಯೊಬ್ಬರು ಹೇಳಿದರು.

ಉಸಾಮ ಹತ್ಯೆಯ ಬಳಿಕ, ಭಯೋತ್ಪಾದಕರ ಜೊತೆ ನಂಟು ಹೊಂದಿದ ಆರೋಪದಲ್ಲಿ ಅಫ್ರಿದಿಯನ್ನು ಬಂಧಿಸಲಾಯಿತು. 2012 ಮೇ ತಿಂಗಳಲ್ಲಿ ಅವರಿಗೆ 33 ವರ್ಷಗಳ ಜೈಲು ಶಿಕ್ಷೆಯನ್ನು ವಿಧಿಸಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News