ದಾವಣಗೆರೆ: ವಿಷಾನಿಲ ಸೇವಿಸಿ ಇಬ್ಬರು ಮೃತ್ಯು, ಓರ್ವ ತೀವ್ರ ಅಸ್ವಸ್ಥ
Update: 2018-04-29 19:27 IST
ದಾವಣಗೆರೆ,ಎ.29: ಯಂತ್ರಗಳ ದುರಸ್ತಿ ವೇಳೆ ವಿಷಾನಿಲ ಸೇವಿಸಿ ಇಬ್ಬರು ಕಾರ್ಮಿಕರು ಮೃತಪಟ್ಟು, ಓರ್ವ ತೀವ್ರ ಅಸ್ವಸ್ಥಗೊಂಡ ಘಟನೆ ತಾಲೂಕಿನ ಕುಕ್ಕವಾಡ ಗ್ರಾಮದ ಸಕ್ಕರೆ ಕಾರ್ಖಾನೆಯಲ್ಲಿ ಸಂಭವಿಸಿದೆ.
ತಾಲೂಕಿನ ಕುಕ್ಕವಾಡ ಗ್ರಾಮದ ಜಿ. ನಾಗರಾಜ(34 ), ಎಂ.ಕೆ.ನಾಗರಾಜ(26) ವಿಷಾನಿಲ ಸೇವನೆಯಿಂದ ಮೃತ ಪಟ್ಟಿದ್ದು, ತೀವ್ರ ಅಸ್ವಸ್ಥಗೊಂಡ ರುದ್ರಪ್ಪ ಎಂಬ ಕಾರ್ಮಿಕನನ್ನು ದಾವಣಗೆರೆಯ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಶುಕ್ರವಾರ ಸಂಜೆ ಸಕ್ಕರೆ ಕಾರ್ಖಾನೆಯಲ್ಲಿ ತ್ಯಾಜ್ಯ ವಿಲೇವಾರಿ ಘಟಕದಲ್ಲಿ ಕೆಲಸ ಮಾಡುತ್ತಿದ್ದಾಗ ಕೆಮಿಕಲ್ ವಾಸನೆಯಿಂದಾಗಿ ಈ ಮೂವರು ಅಸ್ವಸ್ಥರಾಗಿದ್ದು, ಈ ಪೈಕಿ ಇಬ್ಬರು ಮೃತಪಟ್ಟರೆ, ರುದ್ರಪ್ಪ ತೀವ್ರ ಅಸ್ವಸ್ಥರಾಗಿದ್ದಾರೆ. ಈ ಕುರಿತು ಹದಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.