ಚನ್ನಗಿರಿ: ಕಾರು-ಬೈಕ್ ನಡುವೆ ಅಪಘಾತ; 1 ವರ್ಷದ ಮಗು ಮೃತ್ಯು
ಚನ್ನಗಿರಿ,ಎ.29: ಕಾರು ಮತ್ತು ಬೈಕ್ ನಡುವೆ ಅಪಘಾತ ಸಂಭವಿಸಿದ ಪರಿಣಾಮ ಕಾರಿನಲ್ಲಿದ್ದ ಒಂದು ವರ್ಷದ ಮಗು ಮೃತಪಟ್ಟು, ಮೂವರು ಗಾಯಗೊಂಡಿರುವ ಘಟನೆ ತಾಲೂಕಿನ ದೋಣಿಹಳ್ಳಿ ಮತ್ತು ಬಿಲ್ಲಹಳ್ಳಿ ನಡುವೆ ರವಿವಾರ ನಡೆದಿದೆ.
ನಿಖೀಲ್ (1 ವರ್ಷ) ಮೃತಪಟ್ಟ ಮಗು. ಮರವಂಜಿ ಗ್ರಾಮದ ಗಿರೀಶ್ ನಾಯ್ಕ್ ಎಂಬುವರು ತಮ್ಮ ಪತ್ನಿ, ಎರಡು ಮಕ್ಕಳೊಂದಿಗೆ ತಾಲೂಕಿನ ಸಮೀಪವಿರುವ ಕಾಶಿಪುರ ಗ್ರಾಮದಲ್ಲಿ ಸಂಬಂಧಿಕರ ಮದುವೆ ಮುಗಿಸಿಕೊಂಡು ಮರವಂಜಿ ತಾಂಡಕ್ಕೆ ಮರಳುವ ಸಂದರ್ಭ ಬಿಲ್ಲಹಳ್ಳಿ ಮತ್ತು ದೋಣಿಹಳ್ಳಿ ನಡುವೆ ಚನ್ನಗಿರಿಯಿಂದ ನಲ್ಲೂರು ಮಾರ್ಗವಾಗಿ ಬರುತ್ತಿದ್ದ ಬೈಕ್ ಗೆ ಢಿಕ್ಕಿ ಹೊಡೆದಿದೆ. ಪರಿಣಾಮ ಕಾರು ಚಾಲಕನ ನಿಯಂತ್ರಣ ತಪ್ಪಿ ಪಲ್ಟಿ ಹೊಡೆದಿದ್ದು, ಕಾರಿನಲ್ಲಿದ್ದ ಎರಡನೇ ಮಗ ನಿಖಿಲ್ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಕಾರಿನಲ್ಲಿದ್ದ ಚಾಲಕನ ಪತ್ನಿ ಮತ್ತು ಮೊದಲನೇ ಮಗ ಅಕುಲ್ ಗೆ ಗಾಯಾಗಳಾಗಿದ್ದು, ಕೂಡಲೇ ಚನ್ನಗಿರಿ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿ ನಂತರ ಶಿವಮೊಗ್ಗದ ನಂಜಪ್ಪ ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ನೀಡಲಾಗುತ್ತಿದೆ.
ಚನ್ನಗಿರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.